• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿವಿ ಸದಾನಂದ ಗೌಡ ಸಂಪುಟ ಸಚಿವರ ಖಾತೆ ವಿವರ

By Mahesh
|
ಬೆಂಗಳೂರು ಆ.8: ಕರ್ನಾಟಕ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಸಂಪುಟ ಪುನಾರಚನೆ ಮಾಡಿದ್ದಾರೆ, ಮೊದಲ ಹಂತದಲ್ಲಿ 21 ಜನ ಶಾಸಕರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಆ.9ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಯಡಿಯೂರಪ್ಪ ಬಣದಿಂದ 12 ಜನ ಹಾಗೂ ಶೆಟ್ಟರ್ ಬಣದಿಂದ 9 ಜನ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಎಲ್ಲಾ ಸಚಿವರು ಯಡಿಯೂರಪ್ಪ ಸರ್ಕಾರದಲ್ಲಿ ತಾವು ನಿರ್ವಹಿಸಿದ್ದ ಖಾತೆಯನ್ನೇ ಮುಂದುವರೆಸಿಕೊಂಡು ಹೋಗಲಿದ್ದಾರೆ. ಲೋಕಾಯುಕ್ತ ಗಣಿವರದಿಯಲ್ಲಿ ರೆಡ್ಡಿ ಸೋದರರ ಹೆಸರು ಪ್ರಸ್ತಾಪವಾಗಿರುವುದರಿಂದ ಮೊದಲ ಹಂತದಲ್ಲಿ ಅವರನ್ನು ಕ್ಯಾಬಿನೆಟ್ ಗೆ ಸೇರಿಸಿಕೊಂಡಿಲ್ಲ. [21ನೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಚಿವ ಸಂಪುಟ ವಿವರ]

ಎರಡನೇ ಹಂತದ ವಿಸ್ತರಣೆಯಲ್ಲಿ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ, ಆನಂದ್ ಆಸ್ನೋಟಿಕರ್, ಸಿ.ಪಿ ಯೋಗೀಶ್ವರ್, ನರಸಿಂಹ ನಾಯಕ(ರಾಜೂ ಗೌಡ) ಹಾಗೂ ವರ್ತೂರು ಪ್ರಕಾಶ್ ಅವರು ಸಂಪುಟ ದರ್ಜೆ ಸಚಿವರಾಗಿ ಆ.11ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕ್ಯಾಬಿನೆಟ್ ಸಚಿವರು ಅವರ ಕ್ಷೇತ್ರ ಹಾಗೂ ಖಾತೆ ವಿವರ ಹೀಗಿದೆ:

ಸಚಿವರ ಹೆಸರು ಕ್ಷೇತ್ರ ಖಾತೆ
ಡಿ.ವಿ. ಸದಾನಂದ ಗೌಡ - ಸಂಸದೀಯ ವ್ಯವಹಾರ, ಹಣಕಾಸು, ಬಿಡಬ್ಲ್ಯೂಎಸ್ ಎಸ್ ಬಿ, ಗುಪ್ತಚರ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಗಣಿಗಾರಿಕೆ, ಅಲ್ಪಸಂಖ್ಯಾತರ ಕಲ್ಯಾಣ, ಅರೋಗ್ಯ, ಅರಣ್ಯ, ಬಾಕಿ ಉಳಿದ ಎಲ್ಲಾ ಖಾತೆಗಳು
ಗೋವಿಂದ ಕಾರಜೋಳ ಮುಧೋಳ ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ, ಜವಳಿ
ವಿ.ಎಸ್. ಆಚಾರ್ಯ ವಿಧಾನಪರಿಷತ್ ಸದಸ್ಯ ಉನ್ನತ ಶಿಕ್ಷಣ, ಮುಜರಾಯಿ, ಐಟಿ ಬಿಟಿ, ಯೋಜನಾ ಆಯೋಗ
ಉದಾಸಿ ಚನ್ನಬಸಪ್ಪ ಮಹಾಲಿಂಗಪ್ಪ ಹಾನಗಲ್ PWD, ಬಂದರು ಖಾತೆ ಹೊರತು ಪಡಿಸಿ
ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಗ್ರಾಮೀಣ ನೀರು ಪೂರೈಕೆ
ಆರ್ ಅಶೋಕ್ ಪದ್ಮನಾಭ ನಗರ ಗೃಹ(ಗುಪ್ತಚರ, ಬಂದೀಖಾನೆ ಹೊರತುಪಡಿಸಿ), ಸಾರಿಗೆ
ನಾರಾಯಣಸ್ವಾಮಿ ಆನೇಕಲ್ ಅಲ್ಪಸಂಖ್ಯಾತ ಸಮಾಜ ಕಲ್ಯಾಣ, ಬಂದೀಖಾನೆ
ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಗ್ರಂಥಾಲಯ ಹೊರತು ಪಡಿಸಿ
ಬಿಎನ್ ಬಚ್ಚೇಗೌಡ ಹೊಸಕೋಟೆ ಕಾರ್ಮಿಕ ಖಾತೆ, ರೇಷ್ಮೆ
ಸುರೇಶ್ ಕುಮಾರ್ ರಾಜಾಜಿನಗರ ಕಾನೂನು
ಎಸ್ ಎ ರವೀಂದ್ರನಾಥ್ ದಾವಣಗೆರೆ ಉತ್ತರ ಸಕ್ಕರೆ, ತೋಟಗಾರಿಕೆ ಹಾಗೂ ಕೃಷಿ
ಎಸ್ ಎ ರಾಮದಾಸ್ (ಮೈಸೂರು ವೈದ್ಯಕೀಯ ಶಿಕ್ಷಣ(ಆರೋಗ್ಯ ಖಾತೆಯಿಂದ)
ಮುರುಗೇಶ್ ನಿರಾಣಿ ಬಿಳಗಿ ಮಧ್ಯಮ ಹಾಗೂ ಭಾರಿ ಕೈಗರಿಕಾ
ಶೋಭಾ ಕರಂದ್ಲಾಜೆ ಯಶವಂತಪುರ ಇಂಧನ, ಆಹಾರ ಮತ್ತು ನಾಗರಿಕ ಸೌಲಭ್ಯ ಪೂರೈಕೆ
ಉಮೇಶ್ ಕತ್ತಿ ಚಿಕ್ಕೋಡಿ ಕೃಷಿ
ರೇಣುಕಾಚಾರ್ಯ ಹೊನ್ನಾಳಿ ಅಬಕಾರಿ
ಬಸವರಾಜ್ ಬೊಮ್ಮಾಯಿ ಹಾವೇರಿ ನೀರಾವರಿ
ರೇವೂನಾಯಕ್ ಬೆಳಮಗಿ ಗುಲಬರ್ಗ ಗ್ರಾಮೀಣ ಗ್ರಂಥಾಲಯ, ಸಣ್ಣ ಉಳಿತಾಯ, ಹೈನುಗಾರಿಕೆ
ಸಿಸಿ ಪಾಟೀಲ್ ನರಗುಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಲಕ್ಷ್ಮಣ್ ಸವದಿ ಅಥಣಿ ಸಹಕಾರಿ ಖಾತೆ
ಕೃಷ್ಣ ಪಾಲೇಮಾರ್ ಮಂಗಳೂರು ಉತ್ತರ ಬಂದರು, ಮೀನುಗಾರಿಕೆ, ಪರಿಸರ,ವಿಜ್ಞಾನ
ವಿ ಸೋಮಣ್ಣ ವಿಧಾನಪರಿಷತ್ ಸದಸ್ಯ ವಸತಿ
ಬಾಲಚಂದ ಜಾರಕಿಹೊಳಿ ಅರಬಾವಿ ಪೌರಾಡಳಿತ
ಆನಂದ್ ಆಸ್ನೋಟಿಕರ್ ಕಾರವಾರ ಮೀನುಗಾರಿಕೆ, ಐಟಿಬಿಟಿ, ವಿಜ್ಞಾನ ತಂತ್ರಜ್ಞಾನ
ಸಿ.ಪಿ ಯೋಗೀಶ್ವರ್ ಚನ್ನಪಟ್ಟಣ ಅರಣ್ಯ
ನರಸಿಂಹ ನಾಯಕ(ರಾಜೂ ಗೌಡ) ಸುರಪುರ ಸಣ್ಣ ಕೈಗಾರಿಕೆ
ವರ್ತೂರು ಪ್ರಕಾಶ್ ಕೋಲಾರ ಜವಳಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister DV Sadananda Gowda inducted 21 ministers in to his cabinet. All ministers of Yeddurappa tenure are retained with same post. List of Cabinet ministers constituency, portfolio.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more