ಸದಾನಂದ ಗೌಡ ಪೋಸ್ಟ್ ಮ್ಯಾನ್ ಸಿಎಂ : ಹರಿಪ್ರಸಾದ್

ಎರಡು ಭಿನ್ನಮತೀಯ ಬಣಗಳ ನಡುವೆ ಸಂದೇಶ ಹೊತ್ತು ಸಾಗುವ ಕೆಲಸದಲ್ಲಿ ಸದಾನಂದ ಗೌಡ ನಿರತಾಗಿದ್ದಾರೆ. ಸೂಪರ್ ಸಿಎಂ ಯಡಿಯೂರಪ್ಪ ಅವರ ಪತ್ರ ಕೊಂದೊಯ್ದು ಈಶ್ವರಪ್ಪ ಹಾಗೂ ಶೆಟ್ಟರ್ ಬಣಕ್ಕೆ ಮುಟ್ಟಿಸುತ್ತಿದ್ದಾರೆ. ಅಲ್ಲಿಂದ ಸಂದೇಶ ಹೊತ್ತು ಹೈಕಮಾಂಡ್ ಗೆ ತಲುಪಿಸುತ್ತಿದ್ದಾರೆ. ಸರ್ಕಾರ ರಚನೆ, ರಾಜ್ಯದ ಅಭಿವೃದ್ಧಿ ನಗೆಪಾಟಲಾಗಿದೆ ಎಂದು ಹರಿಪ್ರಸಾದ್ ಕಿಡಿ ಕಾರಿದ್ದಾರೆ.
ರಾಜಾಜಿನಗರದಲ್ಲಿ ನಡೆದ 'ಕಾಂಗ್ರೆಸ್ ನಡಿಗೆ ಜನರ ಬಳಿಗೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹರಿಪ್ರಸಾದ್ ಮತ್ತೊಮ್ಮೆ ಲೋಕಾಯುಕ್ತರ ವಿರುದ್ಧ ಹೇಳಿಕೆ ನೀಡಿದ್ದಾರೆ. ಗಣಿ ಅಕ್ರಮಗಳ ತನಿಖೆ ಸಿಬಿಐಗೆ ವಹಿಸಬೇಕು. ಆಗ ಮಾತ್ರ ಯಡಿಯೂರಪ್ಪ ಸೇರಿದಂತೆ ನಾಲ್ವರು ಸಚಿವರಿಗೆ ಶಿಕ್ಷೆ ಸಾಧ್ಯ. ಆದರೆ, ಲೋಕಾಯುಕ್ತ ನೀಡಿರುವ ವರದಿಯನ್ನು ಯಾರೋ ಹೇಳಿ ಬರೆಸಿದ ಹಾಗಿದೆ. ಕೇಂದ್ರ ಬಿಜೆಪಿ ಮುಖಂಡರಿಗೆ ಆಗಾಗ್ಗೆ ತಲುಪುವ ಕಪ್ಪದ ಬಗ್ಗೆ ಅದರಲ್ಲಿ ಪ್ರಸ್ತಾಪವೇ ಇಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ನಿವೃತ್ತರಾದ ಬಳಿಕ ಅವರ ಬಣ್ಣ ಬಯಲು ಮಾಡುವುದಾಗಿ ಹರಿಪ್ರಸಾದ್ ಹೇಳಿಕೊಂಡು ತಿರುಗುತ್ತಿದ್ದರು. ಬೊಗಳೊ ನಾಯಿಗಳಿಗೆ ಉತ್ತರಿಸಲಾರೆ. ನಾಯಿಗಳ ನಿಯಂತ್ರಣ ಬಿಬಿಎಂಪಿ ಕೆಲ್ಸ ಎಂದು ಹೆಗ್ಡೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದರು.












Click it and Unblock the Notifications