ಜಯನಗರದಲ್ಲಿ ರು.1ಕೋಟಿ ಚಿನ್ನಾಭರಣ ಲೂಟಿ

Staffer robs jewellery Jayanagar
ಬೆಂಗಳೂರು, ಆ.6: ಚಿನ್ನದ ಅಂಗಡಿಯಲ್ಲಿ ಕೆಲಸಕ್ಕೆಂದು ಸೇರಿಕೊಂಡು ಸರಿಸುಮಾರು ರು.1 ಕೋಟಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಜಯನಗರ 3ನೇ ಬ್ಲಾಕ್‌ನ ಆಭೂಷಣ್ ಜ್ಯುವೆಲರ್ಸ್‌ನಲ್ಲಿ ನಡೆದಿದೆ. ರಾಜಸ್ಥಾನದ ಸೋಹನ್ ಲಾಲ್ ಖತ್ರಿ ಎಂಬಾತನೆ ಕೋಟಿ ಮೌಲ್ಯದ ಚಿನ್ನಾಭರಣ ದೋಚಿದವ.

ಈತ ಈಗಾಲೆ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪುಣೆಯ ಜೈಲಿನಲ್ಲಿ ಶಿಕ್ಷೆಯನ್ನೂ ಅನುಭವಿಸಿದ್ದ. ಆಭೂಷಣ್ ಜ್ಯುವೆಲರ್ಸ್ ರಾಜಸ್ಥಾನ ಮೂಲದ ವಿಲಾಸ್ ಪಿ ಬೋಹ್ರಾ ಎಂಬುವರಿಗೆ ಸೇರಿದೆ. ಸೋಹನ್ ಲಾಲ್ ಖತ್ರಿ ಕೂಡ ಅದೇ ಊರಿನವ ಹಾಗೂ ಸಂಬಂಧಿಯಾಗಿದ್ದ ಕಾರಣ ಆತನನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು.

ಒಂಬತ್ತು ತಿಂಗಳ ಹಿಂದಷ್ಟೆ ಈತ ಕೆಲಸಕ್ಕೆ ಸೇರಿದ್ದು ತನ್ನ ಚಾಲಾಕಿತನವನ್ನು ಕಡೆಗೂ ತೋರಿಸಿ ಚಿನ್ನಾಭರಣ ಸಮೇತ ಪರಾರಿಯಾಗಿದ್ದಾನೆ. ಶುಕ್ರವಾರ ಮಧ್ಯಾಹ್ನಭೋಜನ ಸಮಯವಾದ ಕಾರಣ ನೌಕರರೆಲ್ಲಾ ಊಟಕ್ಕೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಬಂದ ಗ್ರಾಹಕರಿಗೆ ಆಭರಣಗಳನ್ನು ತೋರಿಸುವ ನಾಟಕವಾಡಿದ್ದಾನೆ.

ಬಳಿಕ ಚಿನ್ನಾಭರಣಗಳನ್ನು ನೇರವಾಗಿ ತನ್ನ ಜೇಬಿಗೆ ಇಳಿಸಿದ್ದಾನೆ. ಮಾಲೀಕರ ಬಳಿ ಊಟಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಹಿಂತಿರುಗಿಲ್ಲ. ಮಾಲೀಕರು ಖತ್ರಿಗೆ ಮೊಬೈಲ್ ಮಾಡಿದರೆ ಸ್ವಿಚ್ ಆಫ್. ಆಭರಣಗಳನ್ನು ಪರೀಕ್ಷಿಸಿಕೊಂಡಾಗ ವಜ್ರಾಭರಣಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಬಳಿಕ ಖತ್ರಿಯ 'ಕತ್ತರಿ' ಬುದ್ಧಿ ಹೊರಬಿದ್ದಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖತ್ರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+