ಪ್ರಿನ್ಸಿಪಾಲ್ ಗದರಿಸಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ
ಹಾಸನ,
ಆ. 6 : ಕಾಲೇಜು ಪ್ರಾಂಗಣದಲ್ಲಿ ಮೊಬೈಲಿನಲ್ಲಿ ಮಾತನಾಡಬೇಡವೆಂದು ಪ್ರಾಂಶುಪಾಲರು ತಾಕೀತು ಮಾಡಿದ್ದಕ್ಕೆ ಪ್ರತಿಯಾಗಿ ಅವಮಾನಗೊಂಡ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದ ಎನ್ ಡಿ ಆರ್ ಕೆ ಕಾಲೇಜಿನಲ್ಲಿ ಶನಿವಾರ ನಡೆದಿದೆ. id="toptextpromo">ಪ್ರಾಂಶುಪಾಲರಾದ
ಶಾಮ್ ಭಟ್ ಅವರು 19 ವರ್ಷದ ಬಿಬಿಎಂ ವಿದ್ಯಾರ್ಥಿ ಗುರುರಾಜ್ ನಿಗೆ ಕಾಲೇಜಿನಲ್ಲಿ ಮೊಬೈಲಲ್ಲಿ ಮಾತನಾಡಬೇಡವೆಂದು ತಿಳಿಸಿದ್ದರು. ನಂತರ ಆತನ ಕುತ್ತಿಗೆ ಪಟ್ಟಿ ಹಿಡಿದು ಪಾಲಕರನ್ನು ಕರೆದುಕೊಂಡು ಬಾ ಇಲ್ಲದಿದ್ದರೆ ಟಿಸಿ ಕೊಟ್ಟು ಮನೆಗೆ ಕಳಿಸುತ್ತೇನೆ ಎಂದು ಗದರಿಸಿದ್ದರೆಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ಕುತ್ತಿಗೆ
ಪಟ್ಟಿ ಹಿಡಿದಿದ್ದಕ್ಕೆ ನೊಂದ ಗುರುರಾಜ್, ಹತ್ತಿರದ ಅಂಗಡಿಗೆ ಹೋಗಿ ಫಿನೈಲ್ ತಂದು ಕಾಲೇಜಿನಲ್ಲಿಯೇ ಕುಡಿದಿದ್ದಾನೆ. ಆತನನ್ನು ಕೂಡಲೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆತ್ಮಹತ್ಯೆಗೆ ಯತ್ನಿಸಿದ ಕೇಸನ್ನು ದಾಖಲಿಸಿಕೊಂಡಿದ್ದು ಪ್ರಾಂಶುಪಾಲರ ವಿಚಾರಣೆ ನಡೆಸಿದ್ದಾರೆ.











Click it and Unblock the Notifications