ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆಗೆ ಆಗ್ರಹ
ನವದೆಹಲಿ
ಆ.5 : 2ಜಿ ಹಗರಣದಂತೆ ಕರ್ನಾಟಕದ ಭೂ ಹಗರಣ ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ಕೂಡಾ ಸಿಬಿಐ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟು ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. id="toptextpromo">ಗಣಿ
ಹಗರಣ ಕುರಿತು ಲೋಕಾಯುಕ್ತರ ವರದಿ ಆಧಾರವಾಗಿಟ್ಟುಕೊಂಡು ಯಡಿಯೂರಪ್ಪ ಹಾಗೂ ಅವರ ಸಹಚರರ ವಿರುದ್ಧ ತನಿಖೆ ನಡೆಸಬೇಕು ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ಸುಪ್ರೀಂ ಕೋರ್ಟಿಗೆ ಮನವಿಯನ್ನು ಸಲ್ಲಿಸಿದ್ದಾರೆ.ಯಡಿಯೂರಪ್ಪ ವಿರುದ್ಧ ರಾಜ್ಯಪಾಲರು ಕ್ರಿಮಿನಲ್ ಕೇಸ್ ಗೆ ಶಿಫಾರಸು ಮಾಡಿದ್ದಾರೆ, ಸಿಬಿಐ ತನಿಖೆಗೆ ನಡೆದರೆ ಸಹಾಯಕಾರಿಯಾಗಲಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. id='are-slot-1' class='oiad oi-axt oiadv'> id='top-searched-articles'> ಗಣಿ ಹಗರಣ ಕುರಿತು ಈಗಾಗಲೇ ಸುಪ್ರೀಂ ಕೋರ್ಟಿನ ಸಮಿತಿ (ಸಿಇಸಿ) ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಿಸಿ ವರದಿ ಸಲ್ಲಿಸಿದೆ. ಇದನ್ನು ತಾರ್ಕಿಕ ತುದಿ ಮುಟ್ಟಿಸಲು ಸಿಬಿಐ ತನಿಖೆಗೆ ಆದೇಶಿಸುವುದು ಅವಶ್ಯವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.












Click it and Unblock the Notifications