ಎಲ್ ಪಿಜಿ ಗೊಂದಲ, ಆಹಾರ ಇಲಾಖೆ ವಿರುದ್ಧ ಕೇಸ್ ಹಾಕುವೆ
ಮೈಸೂರು
ಆ. 5: ಅಹಾರ ಮತ್ತು ನಾಗರಿಕೆ ಸೌಲಭ್ಯ ಪೂರೈಕೆ ಇಲಾಖೆ ಮಾಡಿರುವ ಅವಾಂತರದಿಂದ ಅಡುಗೆ ಅನಿಲ ಗ್ರಾಹಕರು ಸಾಕಷ್ಟು ನೊಂದಿದ್ದಾರೆ. ಸರ್ಕಾರ ಈ ಕೂಡಲೇ ದಾಖಲೆ ಸಲ್ಲಿಕೆ ಕಾರ್ಯವನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ, ಅಡ್ವೋಕೇಟ್ ವೇಣು ಗೋಪಾಲ್ ಹೇಳಿದ್ದಾರೆ. id="toptextpromo">ಅವೈಜ್ಞಾನಿಕ
ಕ್ರಮಗಳನ್ನು ಅನುಸರಿಸಿ ಗ್ರಾಹಕರಿಗೆ ಇಲಾಖೆ ತೊಂದರೆ ಕೊಡುತ್ತಿದೆ. ಗ್ಯಾಸ್ ಕನೆಕ್ಷನ್ ಸಸ್ಪೆಂಡ್ ಆಗಿದೆ ಎಂದು ತಿಳಿದು ಎಲ್ಲರೂ ಅಪರಾಧಿ ಮನೋಭಾವಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಅಹಾರ ಇಲಾಖೆ ತಕ್ಷಣವೇ ಈ ದಾಖಲಾತಿ ಸಲ್ಲಿಕೆ ಕಾರ್ಯಕ್ಕೆ ಮುಕ್ತಾಯ ಹಾಡಬೇಕು ಎಂದು ವೇಣು ಗೋಪಾಲ್ ಆಗ್ರಹಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ದೇಶದ
ಎಲ್ಲಾ ನಾಗರಿಕರಿಗೆ ಇನ್ನೂ ಆಧಾರ್ ಚೀಟಿ ಸಿಕ್ಕಿಲ್ಲ. ಎಲೆಕ್ಟ್ರಿಸಿಟಿ ಮೀಟರ್ ನಂಬರ್(RR ನಂಬರ್) ಅನ್ನು ಮನೆ ವಿಳಾಸಕ್ಕೆ ಜೋಡಿಸುವುದು ಅವೈಜ್ಞಾನಿಕ. ಮೈಸೂರಿನಲ್ಲಿ ಗ್ಯಾಸ್ ಗೊಂದಲಕ್ಕೆ ಈಡಾಗಿ ಶೇ 45 ರಷ್ಟು ಮಂದಿ ಗೊಂದಲದಲ್ಲಿದ್ದಾರೆ. ಇಲಾಖೆ ಅಥವಾ ಸರ್ಕಾರ ತಕ್ಷಣವೇ ಈ ಬಗ್ಗೆ ಗಮನಹರಿಸಬೇಕು ಎಂದು ವೇಣುಗೋಪಾಲ್ ಹೇಳಿದರು.











Click it and Unblock the Notifications