ಶೆಟ್ಟರ್ ಬಣಕ್ಕೆ ಗೃಹಖಾತೆ, ಕಂದಾಯ, ಗ್ರಾಮೀಣ?

ಬೆಂಗಳೂರು ಆ.5: ಕರ್ನಾಟಕ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ನೂತನ ಸಚಿವ ಸಂಪುಟ ರಚಿಸುವುದು ಕಗ್ಗಂಟಾಗಿ ಪರಿಣಮಿಸಿದೆ. ಯಡಿಯೂರಪ್ಪ ಹಾಗೂ ಅನಂತಕುಮಾರ್ ಬಣದ ತಿಕ್ಕಾಟದಿಂದ ಖಾತೆಗಾಗಿ ಕಿತ್ತಾಟ ಆರಂಭವಾಗಿದೆ.

ಮೂಲಗಳ ಪ್ರಕಾರ ಅನಂತಕುಮಾರ್ ಬೆಂಬಲದ ಜಗದೀಶ್ ಶೆಟ್ಟರ್ ಬಣಕ್ಕೆ ಗೃಹ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ (ಆರ್‌ಡಿಪಿಆರ್) ಖಾತೆಗಳನ್ನು ನೀಡಲು ಸದಾನಂದ ಗೌಡರು ಬಹುತೇಕ ಸಮ್ಮತಿ ಸೂಚಿಸಿದ್ದಾರೆ. ಆದರೆ, ಯಡಿಯೂರಪ್ಪ ಬೆಂಬಲಿಗರಿಂದ 20 ಕ್ಯಾಬಿನೆಟ್ ದರ್ಜೆ ಸ್ಥಾನಕ್ಕೆ ಬೇಡಿಕೆ ಬಂದಿದೆ. ಖಾತೆ ಸಮಾನತೆ ಕಾಯ್ದುಕೊಳ್ಳಲು ಸಿಎಂ ಡಿವಿಎಸ್ ಹೆಣಗಾಡುತ್ತಿದ್ದಾರೆ.

ರೆಡ್ಡಿಗಳು ಮತ್ತೆ ಅಂಗಳಕ್ಕೆ: ಶೆಟ್ಟರ್ ಅವರನ್ನು ಸಿಎಂ ಮಾಡುವ ಪ್ರಯತ್ನದಲ್ಲಿ ಸೋತಿರುವ ರೆಡ್ಡಿ ಸೋದರರು, ಉತ್ತರ ಕರ್ನಾಟಕದ ಶಾಸಕರಿಗೆ ಉತ್ತಮ ಸ್ಥಾನ ಸಿಗಲಿ ಎಂದು ಕಿಚ್ಚೆಬ್ಬಿಸಿದ್ದಾರೆ. ಇಬ್ಬರು ಡಿಸಿಎಂ ನೇಮಕ, ಪ್ರಮುಖ ಖಾತೆಗಳು ಶೆಟ್ಟರ್ ಬಣಕ್ಕೆ, ಉತ್ತರ ಕರ್ನಾಟಕಕ್ಕೆ ಸಿಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ, ರೆಡ್ಡಿ ಸೋದರರ ಹೆಸರು ಗಣಿ ವರದಿಯಲ್ಲಿ ಉಲ್ಲೇಖಿಸಿರುವುದರಿಂದ ಅವರ ಸ್ಥಾನಕ್ಕೂ ಸಂಚಕಾರ ಇದೆ.

ಶೋಭಾ ನೇಪಥ್ಯಕ್ಕೆ: ನಿರೀಕ್ಷೆಯಂತೆ ಯಡಿಯೂರಪ್ಪ ಬೆಂಬಲಿತ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ ಮುಂತಾದವರು ಪ್ರಮುಖ ಖಾತೆಯಿಂದ ವಂಚಿತರಾಗುವ ಸಾಧ್ಯತೆಯಿದೆ. ಆರ್ ಅಶೋಕ್, ಸಿಟಿ ರವಿ, ರಾಮದಾಸ್, ಗೋವಿಂದ ಕಾರಜೋಳ ಸೇರಿದಂತೆ ಇತರರಿಗೆ ಉತ್ತಮ ಖಾತೆ ಸಿಗುವ ಸಾಧ್ಯತೆ.

20 ಕ್ಯಾಬಿನೆಟ್ 25 ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಕು ಇದು ಶೆಟ್ಟರ್ ಬಣದ ಬೇಡಿಕೆ. 14 ಕ್ಯಾಬಿನೆಟ್ ಯಡಿಯೂರಪ್ಪ ಬಣದ ಡಿಮ್ಯಾಂಡ್. ಆದರೆ, ಕೊನೆ ಕ್ಷಣದ ಬದಲಾವಣೆಯಂತೆ ಶೋಭಾ, ನಿರಾಣಿ, ಆಚಾರ್ಯರ ಹಾಲಿ ಖಾತೆಗಳನ್ನು ಉಳಿಸಿಕೊಂದು ಸಂಪುಟದಲ್ಲಿ ಸೇರಿಸಿಕೊಳ್ಳುವ ಪ್ರಯತ್ನ ನಡೆದಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಚಿವ ಸಂಪುಟಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+