ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕ್ಯಾನ್ಸರ್

Cancer-Congress president Sonia Gandhi undergo surgery
ನವದೆಹಲಿ, ಆ.5: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕ್ಯಾನ್ಸರ್ ಅಂತೆ. ಹೀಗೊಂದು ಸುದ್ದಿ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಆತಂಕ, ಸಂಚಲವನ್ನುಂಟುಮಾಡುತ್ತಿದೆ. ಆದರೆ ಈ ಕ್ಯಾನ್ಸರ್ ಎಂತಹುದು, ಯಾವ ಹಂತದಲ್ಲಿದೆ ಎಂಬ ವಿವರಗಳು ಬಹಿರಂಗಗೊಂಡಿಲ್ಲ.

ಎಂಟು ತಿಂಗಳಿಂದ ಅವರು ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದನ್ನು ಅತ್ಯಂತ ಗೌಪ್ಯವಾಗಿಡಲಾಗಿತ್ತು. ಆದರೆ ಕ್ಯಾನ್ಸರ್ ಉಲ್ಬಣಿಸಿ, ತಕ್ಷಣ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ವೈದ್ಯರು ಸಲಹೆ ನೀಡಿದ್ದರು ಎಂದು ತಿಳಿದುಬಂದಿದೆ. ಅದರಂತೆ ನ್ಯೂಯಾರ್ಕಿನ ಸ್ಲೋವನ್ ಕೆಟರಿಂಗ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಗುರುವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅಕ್ಕ ಪ್ರಿಯಾಂಕಾ ಮತ್ತು ಭಾವ ಜತೆಗಿದ್ದು, ತಮ್ಮ ತಾಯಿ ವಿಶ್ರಾಂತಿ ಪಡೆಯುತ್ತಿರುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಸೋನಿಯಾ ಆರೋಗ್ಯ ಕಳವಳಕಾರಿಯಾಗಿದ್ದು, ಅದೊಂದು ಸೂಕ್ಷ್ಮ ವಿಷಯವಾಗಿದೆ ಎಂದು ಶಸ್ತ್ರಚಿಕಿತ್ಸೆಯ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಕಾಂಗ್ರೆಸ್ ಪಕ್ಷವು ಅಲವತ್ತುಕೊಂಡಿತ್ತು. ಆದರೆ, ಮಾಧ್ಯಮಗಳು ಸೋನಿಯಾ ಆರೋಗ್ಯ ಕುರಿತಾದ ಮಾಹಿತಿಯ ಬೆನ್ನುಹತ್ತಿದ್ದು, ಅವರಿಗೆ ಕ್ಯಾನ್ಸರ್ ಆಗಿರುವುದು ಖಚಿತವೆಂದು ಬ್ರಿಟನ್ನಿನ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

ಕ್ಯಾನ್ಸರ್ ಚಿಕಿತ್ಸೆ ತಜ್ಞ ಡಾ. ದತ್ತಾತ್ರೇಯುಡು ನೋರಿ ಅವರು ಸ್ಲೋವನ್ ಕೆಟರಿಂಗ್ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕರು. ದತ್ತಾತ್ರೇಯುಡು, ಕರ್ನೂಲು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ. ಮಹಿಳೆಯರ ಕ್ಯಾನ್ಸರ್ ವಿಷಯದಲ್ಲಿ ಇವರು ಪರಿಣತರು. ಪ್ರಸ್ತುತ, ಸೋನಿಯಾ ಗಾಂಧಿಗೆ ಈ ವೈದ್ಯರೇ ಶಸ್ತ್ರಚಿಕಿತ್ಸೆ ಮಾಡಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+