ಸಂಜೆವರೆಗೂ ಕಾದು ನೋಡಿ ನಿಮಗೆ ಗೊತ್ತಾಗುತ್ತೆ: ಗೌಡ
ಬೆಂಗಳೂರು,
ಆ.4: ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಗುರುವಾರ (ಆ.4) ಸಂಜೆ ನಡೆಯುವ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭಕ್ಕೆ ಎಲ್ಲರೂ ಬರುತ್ತಾರೆ. ಬೇಕಿದ್ದರೆ ಕಾದು ನೋಡಿ ಎಂದು ವಿಶ್ವಾಸದಿಂದ ಇಂದು ನುಡಿದರು ನಿಯೋಜಿತ ಮುಖ್ಯಮಂತ್ರಿ ಸದಾನಂದಗೌಡ. id="toptextpromo">ಬೆಂಗಳೂರು
ವಿಜಯನಗರಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸದಾನಂದ ಗೌಡರು ಶ್ರೀಗಳ ಆಶೀರ್ವಾದವನ್ನು ಪಡೆದರು. ಈ ಸಂದರ್ಭದಲ್ಲಿ ಅವರು ಮಾತನಾಡಿದ ಗೌಡರು, ಸಮಾರಂಭವನ್ನು ಯಾರೂ ಬಹಿಷ್ಕರಿಸುವುದಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಪ್ರಮಾಣ ವಚನ ಸಮಾರಂಭದ ಬಹಿಷ್ಕಾರವಂತೂ ಇಲ್ಲವೇ ಇಲ್ಲ ಎಂದರು. id='are-slot-1' class='oiad oi-axt oiadv'> id='top-searched-articles'>ಆದಿಚುಂಚನಗಿರಿ
ಮಠಾಧೀಶ್ವರ ಬಾಲಗಂಗಾಧರ ಸ್ವಾಮಿಜಿಗಳು ಮಾತನಾಡುತ್ತಾ, ಉತ್ತಮ ಆಡಳಿತ ನೀಡಲು ಸದಾನಂದ ಗೌಡರು ಸಮರ್ಥರು. ಅವರ ಆಡಳಿತದ ಅವಧಿಯಲ್ಲಿ ರಾಜ್ಯ ಉತ್ತಮ ಪ್ರಗತಿಯತ್ತ ಮುನ್ನಡೆಯಲಿ ಎಂದು ಅಭಿಪ್ರಾಯಪಟ್ಟರು.











Click it and Unblock the Notifications