ಡಿವಿ ಸಂಘದಕ್ಷ, ಭ್ರಷ್ಟ ಭಕ್ಷ, ಕೃಷಿ ಸುಭಿಕ್ಷಾ ಮಂತ್ರ

ಭ್ರಷ್ಟ ಭಕ್ಷ: ಮಾಧ್ಯಮ ಸಂದರ್ಶನವೊಂದಕ್ಕೆ ಉತ್ತರಿಸುತ್ತ ಡಿವಿ ಜನ ಮೆಚ್ಚುವಂತೆ ಕೆಲಸ ಮಾಡುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ವಿರೋಧಿ ವೇದಿಕೆ ಸ್ಥಾಪಿಸಿ, ಭ್ರಷ್ಟಾಚಾರ ವಿರುದ್ಧ ಹೋರಾಡುವುದಾಗಿ ಹೇಳಿದ್ದಾರೆ. ಪುತ್ತೂರಿನಲ್ಲಿ ಶಾಸಕನಾಗಿದ್ದಾಗಲೇ ಭ್ರಷ್ಟಾಚಾರ ವಿರೋಧಿ ವೇದಿಕೆ ಸ್ಥಾಪಿಸಿದ್ದಾರಂತೆ. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದು ಅವರ ಇಂಗಿತ.
ರೈತ ಸುಭಿಕ್ಷಾ: ನನ್ನ ಆಡಳಿತವಧಿಯಲ್ಲಿ ರೈತರು, ಶೋಷಿತರ ಪರ ಕೆಲಸ ಮಾಡುವೆ. ಇಡೀ ದೇಶಕ್ಕೆ ಮಾದರಿಯಾಗಿ ಆಡಳಿತ ರೂಪಿಸುವೆ. ಅಲ್ಪಾ ಸಂಖ್ಯಾತರು, ಹಿಂದುಳಿದ ವರ್ಗ, ಬಡಜನರಿಗೆ ಇಷ್ಟವಾಗುವಂತೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಸಂಘದಕ್ಷ: ರಾಷ್ಟ್ರೀಯ ಸ್ವಯಂ ಸಂಘ ಸಿದ್ಧಾಂತ, ತತ್ವಕ್ಕೆ ಬದ್ಧ. ಆರ್ಎಸ್ಎಸ್ ಕಟ್ಟಾಳು, ಬಿಜೆಪಿ ಪಕ್ಷದೊಂದಿಗೆ ಬದುಕಿದ್ದೇನೆ. ಪುತ್ತೂರು, ಸುಳ್ಯ, ಉಡುಪಿ, ದಕ್ಷಿಣಕನ್ನಡ ಸೇರಿದಂತೆ ಸಾಮಾನ್ಯ ಬಿಜೆಪಿ ಕಾರ್ಯಕರ್ತನಿಂದ ಆರಂಭವಾಗಿ ಆಡ್ವಾಣಿಯಂತಹ ಹಿರಿಯರವರೆಗೆ ಎಲ್ಲರೂ ನನಗೆ ನೆರವು ನೀಡಿದ್ದಾರೆ. ಕಷ್ಟಕಾಲದಲ್ಲಿ ಸಂತೈಸಿದ್ದಾರೆ ಎಂದು ಅವರು ಹೇಳಿದ್ದಾರೆ.












Click it and Unblock the Notifications