ಶೆಟ್ಟರ್ ಬೆಂಬಲಕ್ಕೆ ನಿಂತವರಲ್ಲಿ ನಾನೂ ಒಬ್ಬ: ಅಶೋಕ್

R Ashok
ಬೆಂಗಳೂರು, ಆ.4: ಮುಖ್ಯಮಂತ್ರಿ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಅವರನ್ನು ಬೆಂಬಲಿಸಿದವರಲ್ಲಿ ನಾನೂ ಒಬ್ಬ. ಆದರೆ ಪಕ್ಷದ ತೀರ್ಮಾನಕ್ಕೆ ತಲೆಬಾಗಿದ್ದೇವೆ ಎಂದು ಗೃಹ ಸಚಿವ ಆರ್ ಅಶೋಕ್ ಗುರುವಾರ ತಿಳಿಸಿದರು. ಆದರೆ ಸಿಎಂ ಸ್ಥಾನಕ್ಕೆ ಸದಾನಂದ ಗೌಡರ ಆಯ್ಕೆ ಅವರನ್ನು ಕೊಂಚ ಅಸಮಾಧಾನಗೊಳಿಸಿದಂತಿತ್ತು.

ಇಂದು ಸಂಜೆ ಸದಾನಂದ ಗೌಡ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ. ಆದರೆ ಈಗಾಗಲೆ ಗೃಹ, ಸಾರಿಗೆ ಖಾತೆಗಳು ಹಾಗೂ ಬೆಂಗಳೂರು ನಗರದ ಉಸ್ತುವಾರಿ ಹೊತ್ತಿರುವ ಅಶೋಕ್ ಖಾತೆಗಳು ಹಾಗೆ ಉಳಿಯಲಿವೆಯೇ? ಅಥವಾ ಅದಲು ಬದಲಾಗಲಿವೆಯೇ?ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಎದ್ದಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಶೋಕ್ ಹಾಕಿದ ಲಕ್ಷ್ಮಣರೇಖೆಯನ್ನು ದಾಟುವರಿರಲಿಲ್ಲ. ಆದರೆ ಮುಂದೆ ಅವರ ಮಾತು ಪಾಲಿಕೆಯಲ್ಲಿ ನಡೆಯುತ್ತದೆಯೇ? ಸಿಎಂ ಸ್ಥಾನಕ್ಕೆ ಅನಂತಕುಮಾರ್ ಅವರನ್ನು ಬೆಂಬಲಿಸಿದ್ದ ಅಶೋಕ್ ಉಪಮುಖ್ಯಮಂತ್ರಿಯಾಗುವ ಕನಸನ್ನು ಕಂಡಿದ್ದರು.

ಈಗ ಸದಾನಂದ ಗೌಡ ಸಚಿವ ಸಂಪುಟದಲ್ಲಿ ಅಶೋಕ್ ಅವರನ್ನು ಉಳಿಸಿಕೊಳ್ಳುತ್ತಾರಾ ಅಥವಾ ಕೈಬಿಡುತ್ತಾರಾ ಎಂಬ ಪ್ರಶ್ನೆಗಳು ಕಾಡುತ್ತಿವೆ. ಪಾಲಿಕೆಯಲ್ಲಿ 112 ಸದಸ್ಯರ ಪೈಕಿ 50 ಮಂದಿ ಅಶೋಕ್ ಬೆಂಬಲಕ್ಕಿದ್ದವರು. ಅಶೋಕ ಹೋಟೆಲ್ "ಆತಿಥ್ಯ"ದ ಖರ್ಚು ವೆಚ್ಚಗಳನ್ನು ನೋಡಿಕೊಂಡಿದ್ದು ಅವರೆ. ಈಗ ಅಶೋಕ್ ಭವಿಷ್ಯದ ಬಗ್ಗೆ ಅವರ ಬೆಂಬಲಿಗರಲ್ಲಿ ಚಿಂತೆಯ ಕಾರ್ಮೋಡ ಕವಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+