ಮಂತ್ರಿಗಿರಿಗೆ ಕಚ್ಚಾಟ, ಕಗ್ಗಂಟಾದ ಕರ್ನಾಟಕ

ಇಂದು ಸಂಜೆ 4.30ಕ್ಕೆ ರಾಜಭವನದಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸದಿರಲು ತೀರ್ಮಾನ ತೆಗೆದುಕೊಂಡಿರುವ ಶೆಟ್ಟರ್ ಮತ್ತು ಸಂಗಡಿಗರು ವರಿಷ್ಠರೇ ಹೊಸ ಸಂಪುಟವನ್ನು ರಚಿಸಬೇಕು ಎಂಬ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ.
ಮೊದಲು, ನೋವಾಗುವಂತೆ ಯಡ್ಡಿ ಬಳಗ ಮಾತನಾಡಿದೆ, ಶಾಸಕರನ್ನು ಕೊಳ್ಳಲಾಗಿದೆ, ಬ್ಲಾಕ್ ಮೇಲ್ ಮಾಡಿ ಓಟು ಗಳಿಸಲಾಗಿದೆ ಎಂಬೆಲ್ಲ ವಾದವನ್ನು ಶೆಟ್ಟರ್ ಬಳಗ ಮುಂದಿಟ್ಟಿತ್ತು. ಈಗ ಸಂಪುಟ ರಚನೆ ಮತ್ತು ಖಾತೆ ಹಂಚಿಕೆ ಕುರಿತಂತೆ ಕ್ಯಾತೆ ತೆಗೆದಿದೆ.
ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದೆ, ಎಲ್ಲರೂ ಪ್ರಮಾಣವಚನದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸದಾನಂದ ಗೌಡರು ನಗುನಗುತ್ತಾ ಹೇಳುತ್ತಿದ್ದರೂ, ಯಾವುದೂ ಸರಿಯಿಲ್ಲ ಎಂದು ಭಿನ್ನರ ನಾಯಕರನೇಕರು ಹೇಳುತ್ತಿರುವ ಮಾತುಗಳಿಂದಲೇ ವೇದ್ಯವಾಗುತ್ತಿದೆ.
ಇಂದು ಸಂಜೆಯೇ ಜಗದೀಶ್ ಶೆಟ್ಟರ್ ನವದೆಹಲಿಗೆ ಧಾವಿಸುತ್ತಿದ್ದು, ಬಿಜೆಪಿ ವರಿಷ್ಠರೊಡನೆ ಮುಂದಿನ ನಡೆಗಳ ಬಗ್ಗೆ ಚರ್ಚಿಸಲಿದ್ದಾರೆ. ಅಂದ ಹಾಗೆ, ಇಂದು ಸದಾನಂದ ಗೌಡರೊಬ್ಬರೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ.












Click it and Unblock the Notifications