ಡಿವಿ ಸಿಎಂ ಆಗಲು ಸುಬ್ರಹ್ಮಣ್ಯದಲ್ಲಿ ಉರುಳು ಸೇವೆ
ಮಂಗಳೂರು,
ಆ.3 : ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಸುಳ್ಯ ತಾಲೂಕಿನ ದೇವರಗುಂಡ ವೆಂಕಪ್ಪ ಸದಾನಂದ (ಡಿ.ವಿ. ಸದಾನಂದ) ಗೌಡ ಅವರ ಹೆಸರು ಮುಂಚೂಣಿಯಲ್ಲಿರುವುದರಿಂದ ಸಂತಸಗೊಂಡಿರುವ ಸುಬ್ರಹ್ಮಣ್ಯದ ನಾಗರಿಕರು ಪಕ್ಷಬೇಧ ಮರೆತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ, ದೇವಳದ ಹೊರಾಂಗಣದಲ್ಲಿ ಮಂಗಳವಾರ ಉರುಳುಸೇವೆ ಸಲ್ಲಿಸಿದರು. id="toptextpromo">ಮಧ್ಯಾಹ್ನದ
ವೇಳೆ ಸುಬ್ರಹ್ಮಣ್ಯದ ನಾಗರಿಕರು, ವಾಹನ ಮಾಲಕರು-ಚಾಲಕರು ಸೇರಿ ಕಾಶಿಕಟ್ಟೆಯಿಂದ ದೇವಳದ ವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದು ದರ್ಪಣತೀರ್ಥ ನದಿಯಲ್ಲಿ ಮಿಂದು ಕ್ಷೇತ್ರದ ವಿಶೇಷ ಹರಕೆಯಾದ ಸಂಪೂರ್ಣ ಶರಣಾಗತಿಯ ಉರುಳುಸೇವೆ ಮಾಡಿದರು. id='are-slot-1' class='oiad oi-axt oiadv'> id='top-searched-articles'>ಜಿಲ್ಲೆಯ
ಇತರ ಕಡೆಗಳಲ್ಲೂ ಸದಾನಂದ ಗೌಡರು ಮುಖ್ಯಮಂತ್ರಿಯಾಗಲೆಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ಹೊಸ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ. ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ? ಜಗದೀಶ್ ಶೆಟ್ಟರ್ ಕೂಡ ಕಣದಲ್ಲಿದ್ದಾರೆ.











Click it and Unblock the Notifications