ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ: ಸದಾನಂದ ಗೌಡ ಸ್ಥಾನಕ್ಕೆ ಸುನೀಲ್ ಆಯ್ಕೆ?

By Mahesh
|
Google Oneindia Kannada News

Karkala MLA Sunil Kumar
ಕಾರ್ಕಳ ಆ.3: ಹಾಲಿ ಸಂಸದ ಸದಾನಂದ ಗೌಡ ಅವರು ಕರ್ನಾಟಕ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಮುಂಬರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಹುಡುಕಾಟ ನಡೆದಿದೆ. ಮೂಲಗಳ ಪ್ರಕಾರ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ವಿ.ಸುನಿಲ್ ಕುಮಾರ್ ಅವರ ಹೆಸರು ಅಂತಿಮಗೊಳ್ಳುವ ನಿರೀಕ್ಷೆಯಿದೆ.

ಚಿಕ್ಕಮಗಳೂರು ಜಿಲ್ಲೆಯ ಬೀರೂರು, ಉಡುಪಿ ಜಿಲ್ಲೆಯ ಬೈಂದೂರು ಹೊರತುಪಡಿಸಿ ಉಡುಪಿ ಲೋಕಸಭೆ ಕ್ಷೇತ್ರ ರೂಪುಗೊಂಡಿದೆ. ನೂತನವಾಗಿ ನಿರ್ಮಾಣ ಗೊಂಡ ಈ ಕ್ಷೇತ್ರದಲ್ಲಿ ಬಿಜೆಪಿಯ ಸದಾನಂದ ಗೌಡ ಅವರು ಬಹುಮತ ದಿಂದ ಆಯ್ಕೆ ಗೊಂಡಿದ್ದರು. ಸದಾನಂದ ಗೌಡರು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿರುವುದರಿಂದ ತೆರವುಗೊಂಡ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಯಲಿದೆ.

ವಿವಾದಿತ ಇನಾಂ ದತ್ತಾತ್ರೇಯ ಪೀಠ ಮುಕ್ತಿ ಅಭಿಯಾನದಲ್ಲಿ ಮುಂದಾಳತ್ವ ವಹಿಸಿದ್ದ ಸುನಿಲ್ ಕುಮಾರ್ ಅವರ ಆಯ್ಕೆಗೆ ಹೈಕಮಾಂಡ್ ಕೂಡಾ ಸಮ್ಮತಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕಾರ್ಕಳ ವಿಧಾನಸಭಾ ಚುನಾವಣೆ(2008)ಯಲ್ಲಿ ಸ್ಪರ್ಧಿಸಿ ಭಾರಿ ಬಹುಮತದೊಂದಿಗೆ ಬಿಜೆಪಿಗೆ ಸುನೀಲ್ ಗೆಲುವು ತಂದುಕೊಡುವಲ್ಲಿ ವಿಫಲರಾದರೂ ಜನ ಮನ್ನಣೆ ಗಳಿಸಿದರು.

ಸುನೀಲ್ ಬಗ್ಗೆ ಒಂದಿಷ್ಟು: ಕಾರ್ಕಳದ ವಾಸುದೇವ- ಪ್ರಮೋದ ದಂಪತಿಯ ಪುತ್ರ. ಇವರು ಬಿಲ್ಲವ ಸಮುದಾಯಕ್ಕೆ ಸೇರಿದ್ದಾರೆ. ಚಿಕ್ಕಮಗಳೂರಿನ ಐಡಿಎಸ್ಜಿ ಹಾಗೂ ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಬಿ.ಎ. ಪದವಿ. 27ನೇ ವಯಸ್ಸಿನಲ್ಲಿ ಕಾರ್ಕಳ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ.. ಎಬಿವಿಪಿ, ದತ್ತಮಾಲೆ ಅಭಿಯಾನ, ಭಜರಂಗದಳ ಸಂಚಾಲಕ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ. ಪ್ರಗತಿಪರ ಕೃಷಿಕರೂ ಹೌದು.

ಉಡುಪಿ ಲೋಕ ಸಭಾ ಕ್ಷೇತ್ರದಲ್ಲಿ ಇವರ ಸಮುದಾಯದ ಮತ ನಿರ್ಣಾಯಕವಾಗಿದೆ. ಸದಾನಂದ ಗೌಡರು ರಾಜೀನಾಮೆ ಸಲ್ಲಿಸಿದೇ ಆದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿ. ಸುನಿಲ್ ಕುಮಾರ್ ಅವರನ್ನು ಕಣಕ್ಕೆ ಇಳಿಸಬೇಕೆಂಬುದು ಕಾರ್ಯಕರ್ತರ ಒತ್ತಾಯಿಸುತ್ತಿದ್ದಾರೆ.

English summary
BJP Yuva Morcha president Karkala MLA V Sunil Kumar is likely to replace DV Sadananda Gowda and contest from Udupi-Chikmagalur Constituency. Sadananda Gowda has been elected as Karnataka CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X