ದಲಿತ ಮಹಿಳೆ ಶೀಲದ ಮೇಲೆ ಛೋಟು ಸವಾರಿ

ಉತ್ತರ ಪ್ರದೇಶದ ಮಾಯಾವತಿ ಸರ್ಕಾರಕ್ಕೆ ಇಡೀ ಸ್ತ್ರೀಕುಲವೇ ಶಾಪ ಹಾಕುತ್ತಿದ್ದರೂ ವಾರದಲ್ಲಿ ಮೂರ್ನಾಲ್ಕು ಮಹಿಳಾ ದೌರ್ಜನ್ಯ ಕೇಸ್ ಗಳು ಖಾಯಂ ಆಗಿರುವುದು ದುರಂತ.
ಫಿರೋಜಾಬಾದ್ ಜಿಲ್ಲೆ ಪೊಲೀಸರ ಪ್ರಕಾರ, 25 ವರ್ಷದ ದಲಿತ ಮಹಿಳೆಯ ಮೇಲೆ ನೆರೆ ಮನೆಯ 14 ವರ್ಷದ ಹುಡುಗ ಛೋಟು ಬಲಾತ್ಕಾರ ಮಾಡಿದ್ದಾನೆ. ಹುಮಾಯುನ್ ನಗರದ ತನ್ನ ನಿವಾಸ ಟೇರೆಸ್ ಮೇಲೆ ಮಲಗಿದ್ದ ಆಕೆ ಮೇಲೆ ಏಕಾಏಕಿ ದಾಳಿ ನಡೆಸಿದ ಹುಡುಗ ಆಕೆಯನ್ನು ಅನುಭೋಗಿಸಿದ್ದಾನೆ.
ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಆರೋಪಿ ಛೋಟುವನ್ನು ಬಂಧಿಸಲಾಗಿದೆ. ವೈದ್ಯರ ವರದಿ ಬಂದ ನಂತರ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications