ಎಂಬಿಎಸ್-5 ಎಲ್ಲೋಯ್ತು ಮಾರಾಯ್ರೆ: ಅಮೃತಾ ಗುರುರಾಜ್

BMTC Chief Traffic Manager (Admin) Takes Action
ಬೆಂಗಳೂರು, ಆಗಸ್ಟ್ 02: ಬೆಂಗಳೂರು ಮಹಾನಗರ ಸಾರೊಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು (ಆ) ಪ್ರಯಾಣಿಕರ ದೂರು ದುಮ್ಮಾನಕ್ಕೆ ಸ್ಪಂದಿಸಿದ್ದು, ಸಂಬಂಧಪಟ್ಟ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಯಾವುದೇ ಕುಂದು ಕೊರತೆಗಳನ್ನು ನಮ್ಮ ಗಮನಕ್ಕೆ ತರಬಹುದು. ಹಾಗೆಯೇ ಅಧಿಕಾರಿಗಳೂ ಸಹ ತಾವು ಕೈಗೊಂಡ ಕ್ರಮಗಳ ಬಗ್ಗೆ ದಟ್ಸ್ ಕನ್ನಡ ಗೆ ತಿಳಿಸಬಹುದು. ನಮ್ಮ ಇ-ಮೇಲ್ ವಿಳಾಸ ಹೀಗಿದೆ: [email protected]

'ಬಿಎಸ್-5 ಎಲ್ಲೋಯ್ತು ಮಾರಾಯ್ರೆ' ದೂರು
ಈ ಮಾರ್ಗದಲ್ಲಿ ಪ್ರಯಾಣಿಕರ ಪ್ರೋತ್ಸಾಹವಿಲ್ಲದೇ ಇರುವುದರಿಂದ 4 ಅನುಸೂಚಿಗಳಲ್ಲಿ 2 ಅನುಸೂಚಿಗಳನ್ನು ರದ್ದುಪಡಿಸಲಾಗಿದೆ. 2 ಅನುಸೂಚಿಗಳು ಕಾರ್ಯಾಚರಣೆಯಲ್ಲಿ ಇರುತ್ತವೆ.

ನೊಂದ ಪ್ರಯಾಣಿಕರ 'ಬಸ್ಸಿನ ಓಡಾಟ ಹೆಚ್ಚಿಸಿ' ಕೋರಿಕೆ
ಜಯನಗರ 9ನೇ, 4ನೇ ಬಡಾವಣೆಯಿಂದ ಮಲ್ಲೇಶ್ವರಂ, ಯಶವಂತಪುರಕ್ಕೆ ಆಚರಣೆಯಲ್ಲಿದ್ದ ಮಾರ್ಗ ಸಂಖ್ಯೆ: 1ಎ ಅನ್ನು ಪ್ರಯಾಣಿಕರ ಪ್ರೋತ್ಸಾಹವಿಲ್ಲದ ಕಾರಣ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿರುತ್ತದೆ.

ಆದ್ದರಿಂದ ಜಯನಗರ 9ನೇ ಬ್ಲಾಕ್‌ನಿಂದ ಮಾರ್ಗ ಸಂಖ್ಯೆ 18 ರಲ್ಲಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದು ಒಂದು ಬಸ್ ಬದಲಾವಣೆ ಮಾಡಿ ಮಾರ್ಗ ಸಂಖ್ಯೆ 99ಎ, 99ಬಿ ಗಳಲ್ಲಿ ಮಲ್ಲೇಶ್ವರಂ ಹಾಗೂ ಯಶವಂತಪುರಕ್ಕೆ ಪ್ರಯಾಣಿಸಬಹುದು.
ಆದಾಗ್ಯೂ ತಮ್ಮ ಕೋರಿಕೆಯ ಮೇರೆಗೆ ಪುನಃ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

ಸಿ.ಜಿ. ಸುಂದರೇಶ್ ಅವರ 'ಬಸ್ ನಿಲ್ಲಿಸಿದ್ದು ಸರಿಯಲ್ಲ' ಎಂಬ ಆಕ್ಷೇಪ
ಮತ್ತೀಕೆರೆ ಬಸ್ ನಿಲ್ದಾಣದಿಂದ ಚೆನ್ನಮ್ಮನಕೆರೆ ಅಚ್ಚುಕಟ್ಟು ವರೆಗೆ ಸಂಚರಿಸುತ್ತಿದ್ದ ಮಾರ್ಗ ಸಂಖ್ಯೆ: 188ಬಿ/99ಬಿ ಯನ್ನು ಸಾಕಷ್ಟು ಪ್ರಯಾಣಿಕರಿಲ್ಲದ ಕಾರಣ ಏ. 13 ರಿಂದ ರದ್ದುಗೊಳಿಸಲಾಗಿದೆ.

ಆದ್ದರಿಂದ ಪ್ರಯಾಣಿಕರು ಮತ್ತೀಕೆರೆ ಬಸ್ ನಿಲ್ದಾಣದಿಂದ ಮಾರ್ಗ ಸಂಖ್ಯೆ: 99ಎ, 99ಬಿ ಗಳಲ್ಲಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದು ಮಾರ್ಗ ಸಂಖ್ಯೆ: 45ಇ, 45ಎಫ್, ಮತ್ತು 45ಜೆ ಗಳಲ್ಲಿ (ಒಟ್ಟು 12 ಅನುಸೂಚಿಗಳಿರುತ್ತವೆ) ಒಂದು ಬಸ್ ಬದಲಾವಣೆ ಮಾಡುವ ಮೂಲಕ ಬ್ಯಾಂಕ್ ಕಾಲೋನಿ, ಹನುಮಂತ ನಗರಕ್ಕೆ ಪ್ರಯಾಣಿಸಬಹುದು.

ಎನ್. ವಿಶ್ವರೂಪಾಚಾರ್ ಅವರ 'ಗುರುತು ಕಾರ್ಡ್ ಇಲ್ಲದ ತನಿಖಾಧಿಕಾರಿ' ಎಂಬ ದೂರು
ಬಿಎಂಟಿಸಿ ತನಿಖಾ ದಳದ ಸಿಬ್ಬಂದಿಗಳು ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಸಮವಸ್ತ್ರ (ಖಾಕಿ) ಧರಿಸಿ, ತನಿಖಾ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ಗುರುತಿನ ಚೀಟಿ ಹೊಂದಿರುವ ಸಂಸ್ಥೆಯ ತನಿಖಾ ಅಧಿಕಾರಿಗಳು ಸಹ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಪ್ರಯಾಣಿಕರು ಸಂದೇಹ ಬಂದಲ್ಲಿ ಸಂಸ್ಥೆಯಿಂದ ನೀಡಿರುವ ಗುರುತಿನ ಚೀಟಿಯನ್ನು ತೋರಿಸಲು ತನಿಖಾಧಿಕಾರಿಗಳನ್ನು ಕೇಳಬಹುದು. ಈ ರೀತಿ ಸಮವಸ್ತ್ರ, ಗುರುತಿನ ಚೀಟಿ ಇಲ್ಲದ ಅನ್ಯ ಸಿಬ್ಬಂದಿಗಳಿಗೆ ಸಂಸ್ಥೆಯ ಬಸ್ಸುಗಳಲ್ಲಿ ತನಿಖೆ ಮಾಡುವ ಯಾವುದೇ ಅಧಿಕೃತ ಆದೇಶವನ್ನು ನೀಡಿರುವುದಿಲ್ಲ.

'ಬಿಎಂಟಿಸಿ ಯಾರ ಸೇವೆಗೆ' ಎಂಬ ನೊಂದ ಪ್ರಯಾಣಿಕರ ದೂರು
ಬಿಡದಿಯಿಂದ ಯಶವಂತಪುರಕ್ಕೆ ಮಾರ್ಗಸಂಖ್ಯೆ: 401ಝಡ್ ವ್ಯವಸ್ಥಿತವಾಗಿ ಆಚರಣೆ ಮಾಡಲು ಸಂಬಂಧಪಟ್ಟ ಘಟಕ ವ್ಯವಸ್ಥಾಪಕರಿಗೆ ಸೂಚಿಸಿ ಕ್ರಮ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+