ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಬ್ಬಲ್ ಮೀನಿಂಗ್ ಡೈಲಾಗ್ ಕಂಡಕ್ಟರಿಗೆ ತಕ್ಕ ಶಾಸ್ತಿ

By * ಮುಖ್ಯ ಸಂಚಾರ ವ್ಯವಸ್ಥಾಪಕರು, ಬಿಎಂಟಿಸಿ
|
Google Oneindia Kannada News

BMTC Chief Traffic Manager (Admin) Takes Action,
ಬೆಂಗಳೂರು, ಆಗಸ್ಟ್ 02: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು (ಆ) ಪ್ರಯಾಣಿಕರ ದೂರು ದುಮ್ಮಾನಕ್ಕೆ ಸ್ಪಂದಿಸಿದ್ದು, ಸಂಬಂಧಪಟ್ಟ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಯಾವುದೇ ಕುಂದು ಕೊರತೆಗಳನ್ನು ನಮ್ಮ ಗಮನಕ್ಕೆ ತರಬಹುದು. ಹಾಗೆಯೇ ಅಧಿಕಾರಿಗಳೂ ಸಹ ತಾವು ಕೈಗೊಂಡ ಕ್ರಮಗಳ ಬಗ್ಗೆ ದಟ್ಸ್ ಕನ್ನಡ ಗೆ ತಿಳಿಸಬಹುದು. ನಮ್ಮ ಇ-ಮೇಲ್ ವಿಳಾಸ ಹೀಗಿದೆ: [email protected]

ಕೃಷ್ಣಮೂರ್ತಿ ಅವರ ನೇರ ಬಸ್ ಬೇಕು ಕೋರಿಕೆ
ಬೆಂಗಳೂರಿನಂತಹ ಮಹಾನಗರದಲ್ಲಿ ಎಲ್ಲಾ ಪ್ರದೇಶಗಳಿಗೂ ನೇರ ಸಾರಿಗೆ ಸೌಲಭ್ಯ ಒದಗಿಸುವುದು ಕಷ್ಟ. ಉಲ್ಲಾಳು ಉಪನಗರದಿಂದ ಪ್ರಮುಖ ಬಸ್ ನಿಲ್ದಾಣಗಳಾದ ಕೆಂಪೇಗೌಡ, ಕೆ.ಆರ್. ಮಾರುಕಟ್ಟೆಗೆ ಪ್ರತ್ಯೇಕವಾಗಿ ಸಾಕಷ್ಟು ಸಾರಿಗೆ ಸೌಲಭ್ಯವಿದೆ. ಅಲ್ಲದೆ ಹೊಸದಾಗಿ ಉಲ್ಲಾಳು ಉಪನಗರದಿಂದ ಕೆಂಗೇರಿಗೆ ಬಿ ಸಿ ಫೀಡರ್ (ಬಿಗ್ ಕನೆಕ್ಟ್) ಮಾರ್ಗದ ಸೌಲಭ್ಯ ಸಹ ಒದಗಿಸಲಾಗಿದೆ.

ಉಲ್ಲಾಳು ಉಪನಗರದಿಂದ ಮಾಗಡಿ ರಸ್ತೆ ಕಡೆಗೆ ಮಾರ್ಗ ಸಂಖ್ಯೆ: 243ಎ, 241ಎ, 243ಜೆ ಈ ಬಸ್ಸುಗಳ ಸೌಲಭ್ಯವಿದ್ದು, ಮಾಗಡಿ ರೋಡ್ ಟೋಲ್ ಬಳಿ ಇಳಿದು ಬಸ್ ಬದಲಾಯಿಸುವ ಮೂಲಕ ಯಶವಂತಪುರಕ್ಕೆ ಪ್ರಯಾಣಿಸಬಹುದು. ಪ್ರಯಾಣಿಕರು ಈ ಮೇಲಿನ ಬಸ್ಸುಗಳ ಸೌಲಭ್ಯ ಪಡೆದು ಅನುಕೂಲಕರ ನಿಲುಗಡೆಗಳಲ್ಲಿ ಇಳಿದು ತಾವು ಇಚ್ಛಿಸುವ ಸ್ಥಳಗಳಿಗೆ ತೆರಳುವ ಮೂಲಕ ಸಹಕರಿಸಲು ಕೋರಿಕೆ.

ನಿತ್ಯ ಮಹಿಳಾ ಪ್ರಯಾಣಿಕರ ಡಬ್ಬಲ್ ಮೀನಿಂಗ್ ಡೈಲಾಗ್ ಕಂಡಕ್ಟರ್ ಎಂಬ ದೂರು
ಮಾರ್ಗ ಸಂಖ್ಯೆ 301ರಲ್ಲಿ (ಕೆ. ಚನ್ನಸಂದ್ರ-ಮಾರುಕಟ್ಟೆ) ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕರನ್ನು ಈ ಕಚೇರಿಗೆ ಕರೆಯಿಸಿ ವಿಚಾರಣೆ ನಡೆಸಿ, ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಪ್ರಯಾಣಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಲು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಎನ್. ಪದ್ಮನಾಭನ್ ಅವರ ನೇರ ಬಸ್ ಬಿಡಿ ಸ್ವಾಮಿ ಎಂಬ ಸಲಹೆ
ಪ್ರಸ್ತುತ ಎಚ್‌ಎಎಲ್ ಮೇನ್ ಗೇಟ್‌ನಿಂದ ಕೃಷ್ಣರಾಜಪುರಕ್ಕೆ ಮಾರ್ಗ ಸಂಖ್ಯೆ 400ಎ ನಲ್ಲಿ 2 ಅನುಸೂಚಿಗಳು, ನಾಗಸಂದ್ರದಿಂದ ಕೃಷ್ಣರಾಜಪುರಕ್ಕೆ ಮಾರ್ಗ ಸಂಖ್ಯೆ: 400ಎಫ್ ನಲ್ಲಿ 1 ಅನುಸೂಚಿ, ಹೆಚ್‌ಎಸ್‌ಆರ್ ಬಿಡಿಎ ಕಾಂಪ್ಲೆಕ್ಸ್‌ನಿಂದ ಎಚ್‌ಎಎಲ್ ಗೇಟ್ ಮಾರ್ಗವಾಗಿ ಬೈಯಪ್ಪನಹಳ್ಳಿ ಬಸ್ ನಿಲ್ದಾಣಕ್ಕೆ ಮಾರ್ಗ ಸಂಖ್ಯೆ 400ಜಿ ನಲ್ಲಿ 2 ಅನುಸೂಚಿಗಳು,

ಅಲ್ಲದೆ ನೂತನವಾಗಿ ಎಚ್‌ಎಎಲ್ ಮೈನ್ ಗೇಟ್‌ನಿಂದ ಮಲ್ಲೇಶಪಾಳ್ಯ, ಕಗ್ಗದಾಸಪುರ, ಮುನಿರೆಡ್ಡಿ ಲೇಔಟ್, ಎ. ನಾರಾಯಣಪುರ ಮಾರ್ಗವಾಗಿ ಕೆ.ಆರ್.ಪುರಂ ರೈಲೆ ಸ್ಟೇಷನ್‌ಗೆ ಬಿಗ್ ಕನೆಕ್ಟ್-12ಎ ಮಾರ್ಗದಲ್ಲಿ 3 ಅನುಸೂಚಿಗಳಿವೆ. ಪ್ರಯಾಣಿಕರು ಈ ಮಾರ್ಗಗಳ ಸಾರಿಗೆ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ.

English summary
BMTC Chief Traffic Manager (Admin) Takes Action against errant conductors and the official also assures to take action on suggestions given by public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X