ಅನಂತ ದೇಗುಲ ಸಂಪತ್ತಿನ ವ್ಯವಸ್ಥಿತ ದಾಖಲಾತಿಗೆ ಚಾಲನೆ
ತಿರುವನಂತಪುರಂ,
ಆಗಸ್ಟ್ 01: ಇಲ್ಲಿಯ ಪದ್ಮನಾಭಸ್ವಾಮಿ ದೇವಾಲಯದಲ್ಲಿ ದೊರೆತ 1 ಲಕ್ಷ ಕೋಟಿ ಮೌಲ್ಯದ ಸಂಪತ್ತನ್ನು ವ್ಯವಸ್ಥಿತವಾಗಿ ದಾಖಲೆ ಗೊಳಿಸುವ ಕೆಲಸವನ್ನು ಸುಪ್ರೀಂಕೋರ್ಟ್ ನೇಮಿಸಿದ ತಜ್ಞರ ಸಮಿತಿಯು ಆರಂಭಿಸಲಿದೆ ಎಂದು ದೇಗುಲದ ಮೂಲಗಳು ಭಾನುವಾರ ತಿಳಿಸಿವೆ. id="toptextpromo">ಈ
ಕಾರ್ಯಕ್ಕಾಗಿ ರಾಷ್ಟ್ರೀಯ ವಸ್ತು ಸಂಗ್ರಹಾಲಯದ ಮಹಾ ನಿರ್ದೇಶಕ ಸಿವಿ ಬೋಸ್ ನೇತೃತ್ವದ ಐದು ಸದಸ್ಯರ ತಂಡವು ಭಾನುವಾರವೇ ತಿರುವನಂತಪುರಂಗೆ ಆಗಮಿಸಿದೆ. ಸಂಪತ್ತಿನ ಮೌಲ್ಯಮಾಪನ ಎಲ್ಲಿಂದ ಮತ್ತು ಹೇಗೆ ಆರಂಭಗೊಳ್ಳಬೇಕು ಎಂಬುದರ ಬಗ್ಗೆ ಬೋಸ್ ತಂಡ ನಿರ್ಧರಿಸಲಿದೆ. id='are-slot-1' class='oiad oi-axt oiadv'> id='top-searched-articles'>ಈ
ಇಡೀ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣಗೊಳಿಸಲಾಗುವುದು. 'ಬಿ' ಉಗ್ರಾಣವನ್ನು ತೆರೆಯುವುದೋ, ಬೇಡವೋ ಎಂಬುದರ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಆದರೆ ಜುಲೈ ತಿಂಗಳ ಆರಂಭದಲ್ಲಿ ಸಂಪತ್ತಿನ ಲೆಕ್ಕಾಚಾರ ಕೈಗೊಂಡಂತೆ ಈಗ ಮಾಡುವುದಿಲ್ಲ. ದೇಗುಲದ ಸಂಪತ್ತಿನ ಚಿತ್ರೀಕರಣ ಮಾಡಲಾಗುವುದು ಎಂದು ತಿರುವಾಂಕೂರಿನ ರಾಜ ಕುಟುಂಬಕ್ಕೆ ಸೇರಿದ ಮೂಲಗಳು ಸ್ಪಷ್ಟಪಡಿಸಿವೆ.











Click it and Unblock the Notifications