ಜು.31ರಂದು ಯಡಿಯೂರಪ್ಪ ರಾಜೀನಾಮೆ ಖಚಿತ

ಯಡಿಯೂರಪ್ಪನವರೇ ತಮ್ಮ ಹಸ್ತಾಕ್ಷರದಲ್ಲಿ ಬರೆದಿರುವ ಹೇಳಿಕೆಯನ್ನು ಸಿಎಂ ನಿವಾಸದ ಎದಿರು ಬಸವರಾಜ್ ಬೊಮ್ಮಾಯಿ ಅವರು ಸುದ್ದಿಗಾರರೆದಿರು ಓದಿದರು. ಆದರೆ, ಯಡಿಯೂರಪ್ಪನವರು ಮಾಧ್ಯಮಗಳ ದೆಹಲಿಯಿಂದ ಮರಳಿದ ನಂತರ ಒಂದು ಬಾರಿಯೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ. ತಮ್ಮ ಬೆಂಬಲಿಗರ ಮುಖಾಂತರವೇ ಹೇಳಿಕೆಗಳನ್ನು ನೀಡುತ್ತಿದ್ದಾರೆ.
"ನಾನು ಜು.31ರಂದು ಭೀಮನ ಅಮವಾಸ್ಯೆ ಕಳೆದ ನಂತರ ರಾಜೀನಾಮೆ ನೀಡುವುದು ಖಚಿತ. ರಾಜೀನಾಮೆ ನೀಡುವುದಿಲ್ಲ ಎಂದು ಸಲ್ಲದ ವರದಿಗಳು ಪ್ರಕಟವಾಗುತ್ತಿವೆ. ಇಲ್ಲದ ಸುದ್ದಿಗಳಿಗೆ ಕಿವಿಯಾಗಬೇಡಿ" ಎಂದು ಯಡಿಯೂರಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹೇಳಿಕೆಯೊಂದಿಗೆ ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪನವರ ಒಂದು ಅಧ್ಯಾಯ ಕೊನೆಗೊಂತಾಗಿದೆ. ಹೊಸ ಮುಖ್ಯಮಂತ್ರಿಯ ಆಯ್ಕೆಗೆ ಯಡಿಯೂರಪ್ಪನವರ ಈ ನಡೆ ದಾರಿ ಮಾಡಿಕೊಟ್ಟಿದೆ. ಹೊಸ ನಾಯಕನನ್ನು ನಾಳೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತಿದೆ. [ಹೊಸ ಮುಖ್ಯಮಂತ್ರಿ ಯಾರು?]












Click it and Unblock the Notifications