70 ಶಾಸಕರ ಬೆಂಬಲವಿದೆ; ಅದೇನ್ ಮಾಡ್ಕೋತೀರೊ ಮಾಡ್ಕೊಳ್ಳಿ

B S Yeddyurappa
ಬೆಂಗಳೂರು, ಜುಲೈ 30: ರಾಜೀನಾಮೆ ನೀಡುವಂತೆ ತಾಕೀತು ಮಾಡಿರುವ ಬಿಜೆಪಿ ಹೈಕಮಾಂಡ್‌ಗೆ ಬೆದರಿಸಲು ಯಡಿಯೂರಪ್ಪ ತಮ್ಮ ಬೆಂಬಲಿಗ ಶಾಸಕರ ಸಂಖ್ಯಾಬಲವನ್ನು ಗುರಾಣಿಯಾಗಿಸಿದ್ದಾರೆ. ಪರಿಣಾಮ ಬಿಜೆಪಿಯಲ್ಲಿ ನಂಬರ್ ಗೇಮ್‌ ಶುರುವಾಗಿದೆ.

ರಾಜೀನಾಮೆ ನೀಡಲು ಷರತ್ತುಗಳನ್ನು ಮುಂದಿಟ್ಟಿರುವ ಯಡಿಯೂರಪ್ಪ, ತಮಗಿರುವ ಸಂಖ್ಯಾಬಲವನ್ನೇ ನೆಚ್ಚಿಕೊಡಿದ್ದಾರೆ. ತಮಗೆ 70 ಶಾಸಕರ ಬೆಂಬಲವಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಸಾಧ್ಯವಾದಷ್ಟು ಶಾಸಕರನ್ನು ತಮ್ಮೆಡೆಗೆ ಎಳೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಆದರೆ, ಯಡಿಯೂರಪ್ಪ ಹೇಳಿಕೊಳ್ಳುವಷ್ಟು ಶಾಸಕರ ಬೆಂಬಲ ಅವರಿಗಿಲ್ಲ ಎಂಬುದು ಹೈಕಮಾಂಡಿಗೆ ಗೊತ್ತು. ಆದರೆ, ಕಡೆಗಣಿಸಲಾಗದಷ್ಟು ಶಾಸಕರು ಯಡಿಯೂರಪ್ಪ ಅವರೊಂದಿಗೆ ಇರುವುದೂ ಅವರನ್ನು ಪೇಚಿಗೆ ಸಿಕ್ಕಿಸಿದೆ. ಆದ್ದರಿಂದಲೇ ಹೈಕಮಾಂಡ್‌ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಇದರ ಪರಿಣಾಮವಾಗಿ ಬಿಜೆಪಿಯಲ್ಲಿ ಈಗ ವಿವಿಧ ಬಣಗಳ ನಡುವೆ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಪೈಪೋಟಿ ಆರಂಭವಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಮುಖ್ಯವಾಗಿ ಯಡಿಯೂರಪ್ಪ ಬಣ, ರೆಡ್ಡಿ ಬಣ, ಜಾರಕೀಹೊಳಿ ಬಣ, ಪಕ್ಷ ನಿಷ್ಟರ ಬಣ ಎಂಬ ನಾಲ್ಕು ಬಣಗಳನ್ನು ಗುರುತಿಸಬಹುದು. ಇಲ್ಲಿ ಯಡಿಯೂರಪ್ಪ ಬಣಕ್ಕೆ ರೆಡ್ಡಿ ಬಣದ ಬೆಂಬಲ ದೊರೆಯುವ ಎಲ್ಲಾ ಸಾಧ್ಯತೆಯಿದೆ. ಜಾರಕೀಹೊಳಿ ಬಣದ ನಿಲುವು ಇನ್ನೂ ನಿಗೂಢ. ಆದರೆ, ಅಧಿಕಾರ ಯಾರಿಗೆ ಒಲಿಯುತ್ತದೋ ಅವರ ಕಡೆಗೆ ಹಾರುವ ಶಾಸಕರ ಬಣದ ಸಂಖ್ಯೆ ಮಾತ್ರ ಅತಿ ಹೆಚ್ಚಾಗಿದೆ. ಹೀಗಾಗಿ ಬಿಜೆಪಿಯಲ್ಲಿ ಈಗ ಏನೂ ಬೇಕಾದರೂ ಆಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+