ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದವರಿಗೆ ಪೂರ್ಣಾವಧಿಗೆ ಸಿಎಂ ಭಾಗ್ಯ ಇಲ್ವೇ ಇಲ್ಲ!

By Srinath
|
Google Oneindia Kannada News

Four CMs from Shimoga incomplete term
ಶಿವಮೊಗ್ಗ, ಜುಲೈ 29: 'ಶಿವಮೊಗ್ಗ ಜಿಲ್ಲೆಯವರಿಗೆ ಪೂರ್ಣಾವಧಿಗೆ ಸಿಎಂ ಆಗಿರುವ ಭಾಗ್ಯ ಇಲ್ಲ' ಎಂಬುದು ಮತ್ತೊಮ್ಮೆ ಸಾಬೀತುಪಡಿಸುವ ಹೊಸ್ತಿಲಲ್ಲಿದೆ ಮಲೆನಾಡು. ಈಚೆಗೆ, ಯಡಿಯೂರಪ್ಪ ಸಿಎಂ ಸ್ಥಾನ ತ್ಯಜಿಸುವ ತವಕದಲ್ಲಿದ್ದರೆ ಆಚೆಗೆ, ಐದನೇ ಮುಖ್ಯಮಂತ್ರಿಯಾಗಿ ಒಳಬರಲು ಈಶ್ವರಪ್ಪ ಸಿದ್ಧತೆ ನಡೆಸಿದ್ದಾರೆ. ಆದರೆ ಅದು ಅಲ್ಪಾವಧಿಯದ್ದು ಎಂಬುದು ಈಗಾಗಲೇ ನಿಕ್ಕಿಯಾಗಿದೆ. ಏಕೆಂದರೆ ಈಗ ಯಾರೇ ನಾಡಿನ ಮುಖ್ಯಮಂತ್ರಿಯಾದರು ಅವರು ಸೇವಾವಧಿ ಒಂದೂವರೆ ವರ್ಷವೂ ದಾಟುವುದಿಲ್ಲ!

ರಾಜ್ಯಕ್ಕೆ ಅತಿ ಹೆಚ್ಚು (4) ಮುಖ್ಯಮಂತ್ರಿಗಳನ್ನು ನೀಡಿದ ಹೆಮ್ಮೆ ಶಿವಮೊಗ್ಗ ಜಿಲ್ಲೆಯದ್ದು. ಆದರೆ, ಯಾರೊಬ್ಬರೂ ಐದು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಪೂರ್ಣಾವಧಿ ಪೂರೈಸದಿರುವುದು ವಿಪರ್ಯಾಸ. ಮುಖ್ಯಮಂತ್ರಿಗಳು ಪೂರ್ಣಾವಧಿ ಪೂರೈಸದ್ದಕ್ಕೆ ಶಾಪ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಜಿಲ್ಲೆಯಿಂದ ತೀರ್ಥಹಳ್ಳಿಯ ಕಡಿದಾಳು ಮಂಜಪ್ಪ, ಸೊರಬದ ಎಸ್‌. ಬಂಗಾರಪ್ಪ, ಚನ್ನಗಿರಿಯ (ಅವಿಭಜಿತ ಶಿವಮೊಗ್ಗ ಜಿಲ್ಲೆ) ಜೆ.ಎಚ್‌. ಪಟೇಲ್‌ ಮತ್ತು ಶಿಕಾರಿಪುರದ ಬಿ. ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಗಳಾದ ಜಿಲ್ಲೆಯ ಜನಪ್ರತಿನಿಧಿಗಳು.

ಇದರಲ್ಲಿ ಕಡಿದಾಳ್‌ ಮಂಜಪ್ಪ ಕೇವಲ 2 ತಿಂಗಳು ಅಧಿಕಾರ ನಡೆಸಿದರೆ, ಬಂಗಾರಪ್ಪ 2 ವರ್ಷ ಮತ್ತು ಜೆ.ಎಚ್‌. ಪಟೇಲ್‌ ಮೂರು ವರ್ಷ ಅಧಿಕಾರ ನಡೆಸಿದರು. ಇದೀಗ ಯಡಿಯೂರಪ್ಪ ಮೂರನೇ ವರ್ಷದ ಅಧಿಕಾರಾವಧಿಯಲ್ಲಿ ಆಗ್ಲೋ ಈಗ್ಲೋ ಎನ್ನುತ್ತಿದ್ದಾರೆ. ಈಶ್ವರಪ್ಪ !?

English summary
So far Shimoga has produced four Chief Ministers in the State. But none has completed full term. Fifth one in the offing, KS Eshvarappa also has to carry the same tag as incumbent CM tenure will be not more than 2 years!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X