ಸಮಾನ ದುಃಖಿಗಳು: ಗಳಗಳನೆ ಅತ್ತ ಮೇಡಂ ಶೋಭಾ

ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ವರಿಷ್ಠರು ಸೂಚನೆ ಕೊಟ್ಟ ಗಳಿಗೆಯೇ ಅಲ್ಲಿ ದುಃಖದ ಛಾಯೆ ಆವರಿಸಿತು. ಅಲ್ಲಿದ್ದ ಸಮಾನಮನಸ್ಕ ಸಚಿವರು, ಶಾಸಕರು ಒತ್ತಡದ ನಡುವೆ ಸಮಾನ ದುಃಖಿಗಳಾಗಿ, ಆಪ್ತರ ಜತೆ ಸಮಾಲೋಚನೆ ನಡೆಸಿದರು.
ಈ ಮಧ್ಯೆ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಏನಾಯಿತೆಂದರೆ... ಇಡೀ ದಿನ ರೇಸ್ ಕೋರ್ಸ್ ಮನೆಯಲ್ಲೇ ಕಾಲ ಕಳೆದ ಯಡಿಯೂರಪ್ಪ, ಮನೆಗೆ ಬಂದವರೆಲ್ಲರಿಗೂ ಹಸ್ತಲಾಘವ ಮಾಡಿ, ವೋಟ್ ಆಫ್ ಥ್ಯಾಂಕ್ಸ್ ಹೇಳುತ್ತಿದ್ದರು. ಇದನ್ನು ಕಣ್ಣಾರೆ ನೋಡಿದ ಮುಖ್ಯಮಂತ್ರಿಗಳ ಪರಮಾಪ್ತ ಸಚಿವೆ ಶೋಭಾ ಕರಂದ್ಲಾಜೆ ಗಳಗಳನೆ ಅತ್ತೇ ಬಿಟ್ಟರು.
ಇದನ್ನು ನೋಡಿ ಶಾಸಕರಾದ ಭಾರತಿ ಶೆಟ್ಟಿ, ಪ್ರೊ.ಎಸ್.ಆರ್.ಲೀಲಾ, ಸುನಿಲ್ ವಲ್ಯಾಪುರೆ ಮೊದಲಾದವರೂ ಒತ್ತರಿಸಿ ಬಂದ ದುಃಖ ತಡೆಯಲಾರದೆ ಕಣ್ಣೀರಿಟ್ಟರು. ಹಲವರು ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು. ಭಾರದ ಹೃದಯ ಹೊತ್ತು ಅಲ್ಲಿಂದ ನಿರ್ಗಮಿಸಿದರು.












Click it and Unblock the Notifications