ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗ ಹರೀಶ್ ಹಂದೆಗೆ ಪ್ರತಿಷ್ಠಿತ ಮ್ಯಾಗ್ಸೇಸೆ ಪ್ರಶಸ್ತಿ

By Mahesh
|
Google Oneindia Kannada News

Nileema and Harish Hande
ಬೆಂಗಳೂರು, ಜು.28: ಏಷ್ಯಾದ ನೊಬೆಲ್ ಎಂದೇ ಖ್ಯಾತಿ ಗಳಿಸಿರುವ ಪ್ರತಿಷ್ಠಿತ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಈ ಬಾರಿ ಇಬ್ಬರು ಭಾರತೀಯರಿಗೆ ದೊರಕಿದೆ. ನೀಲಿಮಾ ಮಿಶ್ರಾ ಹಾಗೂ ಹರೀಶ್ ಹಂದೆ ಅವರು ತಂತ್ರಜ್ಞಾನ ಬಳಕೆ ಮಾಡಿ ಗ್ರಾಮೀಣ ಭಾರತದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ನೀಲಿಮಾ ಅವರು ಮಹಿಳೆಯರ ಸಬಲೀಕರಣಕ್ಕಾಗಿ ದುಡಿದಿದ್ದಾರೆ.

40ರ ಹರೆಯದ ಡಾ.ಹರೀಶ್ ಹಂದೆ ಮೂಲತ: ಉಡುಪಿ ಜಿಲ್ಲೆಯ ಕೋಟದ ಹಂದೆ ಕುಟುಂಬಕ್ಕೆ ಸೇರಿದವರು. ಸೌರ ವಿದ್ಯುತನ್ನು ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಹಾಗೂ ಇನ್ನಿತರ ರಾಜ್ಯದ ಹಳ್ಳಿಹಳ್ಳಿಗೂ ಕೊಂಡೊಯ್ದು, ಸುಮಾರು ಒಂದು ಲಕ್ಷ ಬಡ ಕುಟುಂಬಗಳ ಗುಡಿಸಲುಗಳಲ್ಲಿ ಸೌರ ಶಕ್ತಿಯ ಮೂಲಕ ಬೆಳಕನ್ನು ನೀಡಿದ್ದಾರೆ. ನಿಸ್ವಾರ್ಥ ಮನೋಭಾವದಿಂದ ಸೌರಶಕ್ತಿಯ ಬೆಳಕನ್ನು ಗ್ರಾಮೀಣ ಪ್ರದೇಶಗಳಲ್ಲಿ ಪಸರಿಸಿದ ಕಾರಣಕ್ಕಾಗಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನಲ್ಲಿ ಜನಿಸಿ ಹರೀಶ್ ಹಂದೆ, ಸುಬ್ರಹ್ಮಣ್ಯ ಹಂದೆ ಹಾಗೂ ಸುಶೀಲಾ ಹಂದೆಯವರ ಪುತ್ರ. ಒಡಿಶಾದ ರೂರ್ಕೆಲದಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಪ್ರತಿಷ್ಠಿತ ಐಐಟಿ ಖರಗಪುರದಲ್ಲಿ ಇಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆರು. ಮುಂದೆ ಅಮೆರಿಕದ ಪ್ರತಿಷ್ಠಿತ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ಉನ್ನತ ಜ್ಞಾನ ಸಂಪಾದಿಸಿ ಸೌರ ವಿದ್ಯುತ್ ನತ್ತ ಆಕರ್ಷಿತರಾದರು.

1995ರಲ್ಲಿ ನೆವಿಲ್ಲೆ ವಿಲಿಯಮ್ಸ್‌ರೊಂದಿಗೆ ಸೇರಿ ಸೆಲ್ಕೋ-ಇಂಡಿಯಾ ಎಂಬ ಕಂಪೆನಿಯನ್ನು ಪ್ರಾರಂಭಿಸಿದರು. ಇಂದು ರಾಜ್ಯಾದ್ಯಂತ 1,00,000 ಮನೆಗಳನ್ನು ಸೌರಶಕ್ತಿಯ ಮೂಲಕ ಬೆಳಗಿಸಿದೆ.

ಡಾ.ಹಂದೆಯವರಿಗೆ 2005ರಲ್ಲಿ ಪ್ರಿನ್ಸ್ ಚಾರ್ಲ್ಸ್‌ರಿಂದ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪ್ರಶಸ್ತಿ ದೊರಕಿದೆ. ಅಲ್ಲದೇ ಅದೇ ವರ್ಷ ಅಮೆರಿಕದ 'ಅಸ್ಡನ್ ಅವಾರ್ಡ್" ಹಾಗೂ 'ಟೆಕ್ ಮ್ಯೂಸಿಯಂ ಅವಾರ್ಡ್" ದೊರಕಿವೆ. 2007ರಲ್ಲಿ ಸೆಲ್ಕೊಗೆ ಅಸ್ಡನ್ ಅವಾರ್ಡ್ ಸಿಕ್ಕಿದೆ.

English summary
India has once again brought the coveted and Asia's prestigious Ramon Magsaysay Award home for the year 2011. The proud recipients are Nileema Mishra and Harish Hande.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X