ಲಿಂಗಾಯತ ಮುಖಂಡನಿಗೆ ಮತ್ತೆ ಸಿಎಂ ಪಟ್ಟ

ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದ್ದರೂ ತುಟಿಯಂಚಿನಲ್ಲೇ ನಗುತ್ತಿರುವ ಅನಂತಕುಮಾರ್ ಹೆಸರು ಪ್ರಮುಖವಾಗಿ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ. ಆದರೆ ಅನಂತ್‌ಗೆ ಆರ್‌ಎಸ್‌ಎಸ್ ಬೆಂಬಲವಿಲ್ಲದ ಕಾರಣ ಅವರು ದೆಹಲಿ ರಾಜಕಾರಣದಲ್ಲಿ ಉಳಿದುಕೊಳ್ಳಲಿದ್ದಾರೆ.
ಜಗದೀಶ್ ಶೆಟ್ಟರ್, ಉನ್ನತ ಶಿಕ್ಷಣ ಸಚಿವ ವಿ ಎಸ್ ಆಚಾರ್ಯ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ ಹಾಗೂ ನಗರಾಭಿವೃದ್ಧಿ ಸಚಿವ ಎಸ್ ಸುರೇಶ್ ಕುಮಾರ್ ಸಿಎಂ ರೇಸ್‌ನಲ್ಲಿದ್ದಾರೆ. ಆದರೆ ಅಂತಿಮವಾಗಿ ಸಿಎಂ ಪಟ್ಟ ಯಾರಿಗೆ ಒಲಿಯಲಿದೆ ಎಂಬುದು ನಿಗೂಢವಾಗಿದೆ.
ಮೂಲಗಳ ಪ್ರಕಾರ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನೇ ಸಿಎಂ ಮಾಡಬೇಕು ಎಂಬುದು ಲಿಂಗಾಯತ ಸ್ವಾಮೀಜಿಗಳ ಒತ್ತಾಸೆಯೂ ಆಗಿದೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಲಿಂಗಾಯತರ ಓಟ್ ಬ್ಯಾಂಕ್ ಪ್ರಮುಖ ಪಾತ್ರ ವಹಿಸಿತು ಎಂಬುದು ಸ್ವಾಮೀಜಿಗಳ ಲೆಕ್ಕಾಚಾರವಾಗಿದೆ. (ದಟ್ಸ್‌ಕನ್ನಡ ವಾರ್ತೆ)












Click it and Unblock the Notifications