ಬಿ ಎಸ್ ವೈ, ಎಚ್ ಡಿಕೆ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು
ನವದೆಹಲಿ,
ಜು.28: ಅಕ್ರಮ ಗಣಿಗಾರಿಕೆ ವರದಿಯಿಂದಾಗಿ ಬಿಜೆಪಿ ನಾಯಕರ ಭ್ರಷ್ಟಾಚಾರದ ಕರಾಳ ಮುಖ ಬಹಿರಂಗಗೊಂಡಿದೆ. ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ಸಮಾನ ಆರೋಪಿಗಳಾಗಿ ನಿಂತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿಕೆ ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. id="toptextpromo">ಕುಮಾರಸ್ವಾಮಿ
ರಾಜಕಾರಣ ಮಾಡುವುದು ಹೇಗೆ ಎಂದು ಪಾಠ ಮಾಡಬೇಕಿಲ್ಲ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು. ಆದರೆ, ಲೋಕಾಯುಕ್ತರ ಬಣ್ಣ ಬಯಲು ಮಾಡುತ್ತೇನೆ ಎಂದು ಕೂಗಾಡಿದ್ದ ಹರಿಪ್ರಸಾದ್, ಮೊದಲು ಲೋಕಾಯುಕ್ತರ ಅವಧಿ ಮುಗಿಯಲಿ ಆಮೇಲೆ ಅವರ್ ಜಾತಕ ಬಿಚ್ಚುತ್ತೇನೆ ಎಂದರು. id='are-slot-1' class='oiad oi-axt oiadv'> id='top-searched-articles'>ಮುಖ್ಯಮಂತ್ರಿ
ಯಡಿಯೂರಪ್ಪ ಹಾಗೂ ಸಂಸದ ಎಚ್.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ವರದಿಯಲ್ಲಿ ಪ್ರಸ್ತಾಪಿತವಾಗಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆರೋಪ ಹೊತ್ತು ಅಧಿಕಾರದಲ್ಲಿ ಮುಂದುವರೆಯಲು ನಾಚಿಕೆಯಾಗುವುದಿಲ್ಲವೇ ಎಂದು ಹರಿ ಪ್ರಶ್ನಿಸಿದ್ದಾರೆ.











Click it and Unblock the Notifications