ಗುರುವಾಯೂರು ಮಂದಿರ, ಜಯಲಲಿತಾಗೆ ಅಲ್ ಖೈದಾ ಬೆದರಿಕೆ

ದೇಗುಲ ಸ್ಫೋಟದ ಬಗ್ಗೆ ಅಲ್ ಖೈದಾ ಹೆಸರಿನಲ್ಲಿ ಬೆದರಿಕೆ ಪತ್ರ ಬಂದಿರುವುದನ್ನು ದೇಗುಲದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಟೈಪ್ ರೈಟರ್ ನಲ್ಲಿ ಟೈಪ್ ಮಾಡಿದ ಇಂಗ್ಲೀಷ್ ನಲ್ಲಿರುವ ಪತ್ರವನ್ನು ಚೆನ್ನೈ ನಗರದಿಂದ ರವಾನಿಸಲಾಗಿದೆ. ದೇಶದ ನಂಬರ್ ಒನ್ ಸಿರಿವಂತ ದೇವಾಲಯವಾದ ತಿರುವನಂತಪುರ ಅನಂತಪದ್ಮನಾಭ ದೇವಾಲಯದ ಮೇಲೂ ಉಗ್ರರ ಕಣ್ಣು ಬಿದ್ದಿದ್ದು ಅಲ್ಲೂ ಬಾಂಬ್ ದಾಳಿ ನಡೆಸುವುದಾಗಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಗುರುವಾಯೂರು ಉಪ ಪೋಲಿಸ್ ಆಯುಕ್ತರು ಮಾತನಾಡುತ್ತಾ, ಗುಜರಾತ್ ನರೇಂದ್ರ ಮೋದಿ ಸರಕಾರವನ್ನು ವಜಾಗೊಳಿಸಬೇಕು, ಸೆಲ್ವಿ ಜಯಲಲಿತಾ ಕೂಡಾ ಅಧಿಕಾರದಿಂದ ಕೆಳಗಿಳಿಯಬೇಕು, ಪತ್ರ ಸ್ವೀಕಾರವಾದ ಒಂದೆರಡು ದಿನದಲ್ಲಿ ನಾವು ಭಯೋತ್ಪಾದಕ ಕೃತ್ಯ ನಡೆಸುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಇದು ಹುಸಿ ಬೆದರಿಕೆಯೆಂದು ನಾವು ಕಡೆಗಣಿಸುವುದಿಲ್ಲ. ಮಂದಿರಕ್ಕೆ ಸೂಕ್ತ ಭದ್ರತೆ ನೀಡಿದ್ದೆವೆಂದು ಆಯುಕ್ತರು ಹೇಳಿದ್ದಾರೆ.












Click it and Unblock the Notifications