ಮಧ್ಯಾಹ್ನ 3.30ಕ್ಕೆ ಅಕ್ರಮ ಗಣಿಗಾರಿಕೆ ವರದಿ ಸಲ್ಲಿಕೆ

ನಾನು ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಭ್ರಷ್ಟರನ್ನು ಬಯಲಿಗೆಳೆಯುವಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಲೋಕಾಯುಕ್ತರು ಹೇಳಿದ್ದಾರೆ.
ಬಿಎಸ್ ವೈ ಪ್ರತಿಕ್ರಿಯೆ: ವರದಿ ಬಗ್ಗೆ ಚರ್ಚಿಸಲು ಸಚಿವ ಸಂಪುಟ ಸಭೆ ಕರೆಯಲಾಗುವುದು. ನಾನು ದೆಹಲಿ ನಮ್ಮ ವರಿಷ್ಠರೊಡನೆ ಈ ಬಗ್ಗೆ ಚರ್ಚಿಸುತ್ತಿದ್ದೇನೆ. ದೆಹಲಿಗೆ ಕರೆದರೆ ಹೋಗಿ ಬರುತ್ತೇನೆ. ನಮ್ಮದು ದೇವೇಗೌಡರ ಪಕ್ಷವಲ್ಲ,ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಬಿಜೆಪಿ ಶಾಸಕರು, ಸಚಿವರು ಬೀಡು ಬಿಟ್ಟಿದ್ದು, ಯಡಿಯೂರಪ್ಪ ಅವರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ.
ಈ ಮಧ್ಯೆ ಮಾಜಿ ರಾಜ್ಯಾಧ್ಯಕ್ಷ ಸದಾನಂದ ಗೌಡರರನ್ನು ಹೈ ಕಮಾಂಡ್ ದೆಹಲಿಗೆ ಕರೆಸಿಕೊಂಡಿದ್ದು, ಸದಾನಂದ ಗೌಡರು ದೀಢೀರ್ ಎಂದು ದೆಹಲಿಗೆ ತೆರಳಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.












Click it and Unblock the Notifications