ಸರ್ಕಾರ ಉರುಳುವ ಆತಂಕ; ಕಡತಯಜ್ಞಕ್ಕೆ ಸಚಿವರು ಅಂಕಿತ

ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಸಾಧ್ಯತೆಯ ಹಿನ್ನೆಲೆಯಲ್ಲಿ ಸರ್ಕಾರಕ್ಕೇ ತೊಂದರೆಯುಂಟಾಗಬಹುದು ಎಂಬ ಭೀತಿಯಿಂದ ಹಲವಾರು ಸಚಿವರು ತಮ್ಮ ಇಲಾಖೆಗೆ ಸಂಬಂಧಿಸಿದ ಮಹತ್ವದ ಕಡತಗಳನ್ನು ತರಾತುರಿಯಲ್ಲಿ ವಿಲೇವಾರಿ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ತಮ್ಮ ಇಲಾಖೆಗಳ ಪ್ರಮುಖ ಯೋಜನೆಗಳ ಕಡತಗಳನ್ನು ತಮ್ಮ ನಿವಾಸಕ್ಕೇ ತರಿಸಿಕೊಂಡು ಪರಿಶೀಲಿಸಿ ವಿಲೇವಾರಿ ಮಾಡುತ್ತಿದ್ದಾರೆ. ಸೋಮವಾರ ಮಧ್ಯರಾತ್ರಿವರೆಗೂ ಕೆಲವು ಸಚಿವರು ಈ ಕೆಲಸದಲ್ಲಿ ನಿರತರಾಗಿದ್ದರು ಎನ್ನಲಾಗಿದೆ.
ಇದು ಹೊಸ ಸಂಪ್ರದಾಯವೇನಲ್ಲ. ಹಿಂದಿನ ಎಲ್ಲ ಸರ್ಕಾರಗಳಲ್ಲೂ ನಡೆದಿರುವಂಥದ್ದೇ. ಆಯಾ ಕಾಲದಲ್ಲಿ ಮುಖ್ಯಮಂತ್ರಿಗಳ ಪದಚ್ಯುತಿ ಅಥವಾ ಸರ್ಕಾರ ಉರುಳುವ ಮುನ್ಸೂಚನೆ ಕಾಣಿಸುತ್ತಿದ್ದಂತೆಯೇ ಸಚಿವರು ತಮ್ಮ ಇಲಾಖೆಗಳ ಪ್ರಮುಖ ಕಡತಗಳನ್ನು ತರಾತುರಿಯಲ್ಲಿ ವಿಲೇವಾರಿ ಮಾಡುವ ಮೂಲಕ ತಮಗೆ ಸಲ್ಲಬೇಕಾದ ಪಾಲಿನ ಲೆಕ್ಕಾಚಾರವನ್ನು ಚುಕ್ತಾ ಮಾಡಿಸಿಕೊಂಡುಬಿಡ್ತಾರೆ.
ಸಾಮಾನ್ಯವಾಗಿ ಹೀಗೆ ವಿಲೇವಾರಿಯಾಗುವ ಇಲಾಖೆಗಳ ಪಟ್ಟಿಯಲ್ಲಿ ಜಲಸಂಪನ್ಮೂಲ, ಲೋಕೋಪಯೋಗಿ, ಕೈಗಾರಿಕೆ, ಸಣ್ಣ ನೀರಾವರಿ, ನಗರಾಭಿವೃದ್ಧಿ, ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳು ಪ್ರಮುಖವಾದವು.











Click it and Unblock the Notifications