ಬೆಂಗಳೂರಿನಲ್ಲಿ 26 ಕ್ಯಾಬರೆ ನರ್ತಕಿಯರ ಬಂಧನ

ಅಶ್ಲೀಲ ನೃತ್ಯ ಮಾಡಿ ಗಿರಾಕಿಗಳಿಗೆ ಉತ್ತೇಜಿಸುತ್ತಿದ್ದ 22 ಬಾರ್ ಗರ್ಲ್‌ಗಳು ಹಾಗೂ ಅವರನ್ನು ಬಲವಂತವಾಗಿ ಈ ಕೆಲಸಕ್ಕ್ಕೆ ನೂಕಿದ್ದ ನಾಲ್ಕು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಲ್ಲಿ ನೇಪಾಳ, ಮುಂಬೈ, ಪಂಜಾಬ್ ಹಾಗೂ ದೆಹಲಿ ಮೂಲದ 19 ಮಂದಿ ಮಹಿಳೆಯರು ಇದ್ದಾರೆ.
ಎಸ್ ಆರ್ ನಗರದ ಪಲ್ಲವಿ ಚಿತ್ರಮಂದಿರ ಬಳಿಯ ಫೋರ್ ಸೀಸನ್ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂಆರ್‌ಎಂವಿ ಬಡಾವಣೆಯ ಚೆಫ್ ಇನ್ ಡಿಲಕ್ಸ್ ಬಾರ್ ಅಂಡ್ ರೆಸ್ಟೋರೆಂಟ್‍ಗಳ ಮೇಲೆ ಸಿಸಿಬಿ ಪೊಲೀಸರು ಗುರುವಾರ ರಾತ್ರಿ ದಾಳಿ ನಡೆಸಿ ಅಶ್ಲೀಲ ನೃತ್ಯದಲ್ಲಿ ತೊಡಗಿದ್ದ 26 ಮಂದಿಯನ್ನು ಬಂಧಿಸಿದ್ದಾರೆ.
ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಬಾರ್‌ಗಳಲ್ಲಿ ಮಹಿಳೆಯ ಸೇವೆಗೆ ಮೌಕಿಕವಾಗಿ ಅನುಮತಿ ನೀಡಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಕೆಲವು ಬಾರ್ ಅಂಡ್ ರೆಸ್ಟೋರೆಂಟ್‌ಗಳು ಅಶ್ಲೀಲ ನೃತ್ಯಗಳನ್ನು ಆಯೋಜಿಸಿ ಹಣ ಮಾಡುವ ದಂಧೆಗೆ ಇಳಿದಿದ್ದವು.
ಈ ಅಶ್ಲೀಲ ನೃತ್ಯಕ್ಕೆ ಪ್ರಚೋದಿಸುತ್ತಿದ್ದ ಯಲಹಂಕ ನಿವಾಸಿ ಹಾಗೂ ಶಿವಮೊಗ್ಗ ಮೂಲದ ಎಚ್ ಎಸ್ ಸತೀಶ್ (30), ಗಂಗಾನಗರ ನಿವಾಸಿ ಜಿ ರವಿ (38), ತಮಿಳಿನಾಡು ಮೂಲದವರಾದ ಲೋಕನಾಥ್ (39) ಹಾಗೂ ಮಣಿಕಂಠ (26) ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. (ದಟ್ಸ್‌ಕನ್ನಡ ವಾರ್ತೆ)












Click it and Unblock the Notifications