ಕಸ ತೋರಿಸಿ ಬಹುಮಾನ ಗೆಲ್ಲಿ: ಬಿಬಿಎಂಪಿ ಸಕತ್ ಐಡಿಯಾ

ಫೋಟೋ ತೆಗೆದು ಬಿಬಿಎಂಪಿಗೆ ಕಳಿಸಿದರೆ ಪಾಲಿಕೆಯಿಂದ 2 ಸಾವಿರ ರೂ.ಗಳ ಬಹುಮಾನ ಪಡೆಯುವ ಛಾನ್ಸ್ ನಿಮ್ಮದು. ನಗರದಲ್ಲಿ ಅನಧಿಕೃತವಾಗಿ ತ್ಯಾಜ್ಯ ಸುರಿಯುವುದನ್ನು ಕಟ್ಟುನಿಟ್ಟಾಗಿ ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಭೇಷ್ ಮೈ ಡಿಯರ್ ಬಿಬಿಎಂಪಿ.
ಈ ಸ್ಕೀಮ್ ನಲ್ಲಿ ಎರಡನೇ ವ್ಯಕ್ತಿಯಾಗಿ ಬಹುಮಾನ ಗಿಟ್ಟಿಸಿಕೊಂಡವರು ನವರಸ ನಾಯಕ ಜಗ್ಗೇಶ್. ಕಾಡು ಮಲ್ಲೇಶ್ವರ ವಾರ್ಡ್ ವ್ಯಾಪ್ತಿಯ ಎಂಕೆಕೆ ರಸ್ತೆಯ ರೈಲು ಕೆಳಮಾರ್ಗದಲ್ಲಿ ಲಾರಿಯೊಂದರಿಂದ ತ್ಯಾಜ್ಯ ಸುರಿಯುವುದನ್ನು ಗಮನಿಸಿದ ಜಗ್ಗೇಶ್, ತಕ್ಷಣವೇ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ.
ಅನಧಿಕೃತವಾಗಿ ಕಸ ಬಿಸಾಕಿದ ಆರೋಪದ ಮೇಲೆ ಬಸವರಾಜು ಎಂಬುವರಿಂದ 10,000 ರೂ. ದಂಡ ವಸೂಲಿ ಮಾಡಲಾಗಿದೆ. ಇವೇ ಮುಂತಾದ "ನಿಮ್ಮ ನಗರವನ್ನು ಸ್ವಚ್ಛವಾಗಿಡಿ" ಆಂದೋಲನದ ವಿವರಗಳನ್ನು ಸಚಿವ ಅಶೋಕ ಪ್ರಕಟಿಸಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬುಧವಾರ ಸಚಿವ ಆರ್.ಅಶೋಕ ಅವರು ಜಗ್ಗೇಶ್‌ಗೆ ಬಹುಮಾನದ ಚೆಕ್ ನೀಡಿದ್ದಾರೆ. ಸಾರ್ವಜನಿಕರು ಕೂಡಾ ಇದೇ ರೀತಿ ಅನಧಿಕೃತವಾದ ತ್ಯಾಜ್ಯ ಸುರಿಯುತ್ತಿರುವುದು ಕಂಡು ಬಂದರೆ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು. ಅಂದಹಾಗೆ ಈ ಸ್ಕೀಮ್ ನಲ್ಲಿ ಬಹುಮಾನ ಪಡೆದ ಮೊದಲಿಗ ಬಸವೇಶ್ವರನಗರ ನಾಗಪುರ ವಾರ್ಡ್ ನ ನಿವಾಸಿ ಕುಶಾಲ್.
ಈ ದೂರವಾಣಿ ಸಂಖ್ಯೆಗಳನ್ನು ಬರೆದಿಟ್ಟುಕೊಳ್ಳಿ ಅಥವಾ ಈ ಪೇಜ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ:
ಕೇಂದ್ರ ಕಚೇರಿ- (080)2222 1188/ 22975595;
ಪೂರ್ವ- 2297 5803; ಪಶ್ಚಿಮ- 2346 3366;
ದಕ್ಷಿಣ- 2656 6362;
ಬ್ಯಾಟರಾಯನಪುರ- 2363 6671;
ಮಹದೇವಪುರ- 2851 2300;
ಬೊಮ್ಮನಹಳ್ಳಿ- 2573 5642;
ರಾಜರಾಜೇಶ್ವರಿನಗರ- 2860 0954;
ದಾಸರಹಳ್ಳಿ- 2839 3688.
ಬೃಹತ್ ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಅಕ್ರಮವಾಗಿ ಸುಮಾರು 10 ಸಾವಿರ ಟನ್ ಕಸವನ್ನು ಬೆಕಾಬಿಟ್ಟಿಯಾಗಿ ಸುರಿಯಲಾಗುತ್ತಿದೆ. ಈ ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ಸುಮಾರು 100 ಕೋಟಿ ಖರ್ಚು ಮಾಡುತ್ತಿದೆ. ಹಾಗಾಗಿ ಕಸ ನಿರ್ವಹಣೆ, ನಿಯಂತ್ರಣ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅಶೋಕ್ ವಿನಂತಿಸಿಕೊಂಡಿದ್ದಾರೆ. ಬಹುಮಾನ ಪಡೆಯುವ ಮೂರನೇ ಬೆಂಗಳೂರಿಗ ನೀವಾಗಬಹುದು. ರೆಡಿ ನಾ?
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications