ನಿತ್ಯಾನ ಆಶ್ರಮದಲ್ಲಿ ಕಪ್ಪೆ ಕುಣಿತ: ಮಾಧ್ಯಮಗಳ ಮೇಲೆಯೇ ಕೇಸ್

Swami Nithyananda Ashram notice to media
ಬೆಂಗಳೂರು ಜು 21: ಗುರು ಪೂರ್ಣಿಮೆಯಂದು ಆಶ್ರಮದಲ್ಲಿ ಆಯೋಜಿಸಿದ್ದ ಕುಂಡಿಲಿನಿ ಯೋಗದ ಕಾರ್ಯಕ್ರಮವನ್ನು ಅತ್ಯಂತ ಕೆಟ್ಟದಾಗಿ ಮಾಧ್ಯಮಗಳು ಪ್ರಸಾರ ಮಾಡಿದೆ. ಇದರಿಂದ ಭಕ್ತರ ಮನಸ್ಸಿಗೆ ನೋವುಂಟಾಗಿದೆ ಎಂದು ಈ ಸುದ್ದಿ ಪ್ರಸಾರ ಮಾಡಿದ ಚಾನೆಲ್ ಮತ್ತು ಮಾಧ್ಯಮಗಳ ವಿರುದ್ಧ ನಿತ್ಯಾ ಭಕ್ತನೊಬ್ಬ ದೂರು ದಾಖಲಿಸಿದ್ದಾನೆ.

ನಿತ್ಯಾನ ಕಟ್ಟಾ ಅನುಯಾಯಿ ಎ.ಸಿ.ನರೇಂದ್ರ ಎಂಬಾತ ದೃಶ್ಯ ಮತ್ತು ಮುದ್ರಣ ಮಾಧ್ಯಮದ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಧಾರ್ಮಿಕ ಮನೋಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಸುದ್ದಿಯನ್ನು ಪ್ರಸಾರ ಮಾಡಿದ ಎರಡು ಖಾಸಗಿ ಸುದ್ದಿ ವಾಹಿನಿಗಳು ಹಾಗೂ ಮುದ್ರಣ ಮಾಧ್ಯಮದ ವಿರುದ್ಧ ಐಪಿಸಿ ಸೆಕ್ಷನ್ 295A ಅನ್ವಯ ದೂರು ದಾಖಲಿಸಲಾಗಿದೆ.

ಜುಲೈ 15ರ ಗುರು ಪೂರ್ಣಿಮೆ ದಿನದಂದು ಬಿಡದಿಯ ಧ್ಯಾನಪೀಠ ಆಶ್ರಮದಲ್ಲಿ ಕುಂಡಿಲಿನಿ ಯೋಗ ಆಯೋಜಿಸಲಾಗಿತ್ತು. ಆದರೆ ಈ ಸಂದರ್ಭದಲ್ಲಿ ನಿತ್ಯಾನಂದರ ಪರಮ ಭಕ್ತೆ ರಂಜಿತಾ ಸೇರಿದಂತೆ ಹಲವು ಭಕ್ತರು ಭಾವಪರವಶರಾಗಿ ಕಪ್ಪೆಯಂತೆ ಕುಣಿದು, ಕುಪ್ಪಳಿಸಿ ವಿಚಿತ್ರ ರೀತಿಯಲ್ಲಿ ವರ್ತಿಸಿದನ್ನು ಮಾಧ್ಯಮಗಳು ನೇರವಾಗಿ ಪ್ರಸಾರ ಮಾಡಿದ್ದವು.

ಮಾಧ್ಯಮಗಳಿಗೆ ಕುಂಡಲಿನಿ ಧ್ಯಾನದ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲ. ಹಾಗಾಗಿ ತಪ್ಪಾಗಿ ತಿಳಿದುಕೊಂಡು ವರದಿ ಮಾಡುವ ಮೂಲಕ ಸಾರ್ವಜನಿಕರಿಗೆ ತಪ್ಪು ಮಾಹಿತಿ ರವಾನಿಸಿದ್ದಾರೆ. ಸತ್ಯ ಮತ್ತು ಧಾರ್ಮಿಕ ಭಾವನೆಯನ್ನು ತಿರುಚಿ ಸುದ್ದಿಯನ್ನು ಪ್ರಸಾರ ಮಾಡಿರುವುದು ದುರದುಷ್ಟಕರ ಎಂದು ನರೇಂದ್ರ ದೂರಿನಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+