ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರದಿ ಸೋರಿಕೆಯಾಗಿದೆ ನಿಜ, ಕ್ಷಮಿಸಿ: ಲೋಕಾಯುಕ್ತ ಹೆಗ್ಡೆ

By Srinath
|
Google Oneindia Kannada News

santosh hegde, yadiyurappa
ಬೆಂಗಳೂರು, ಜುಲೈ21: ಅಕ್ರಮ ಗಣಿ ವರದಿ ಸೋರಿಕೆಯಾಗಿದ್ದು ನಿಜ ಎಂದು ಸ್ವತಃ ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ ಒಪ್ಪಿಕೊಂಡಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಈ ಬಗ್ಗೆ ಮಾಧ್ಯಮಗಳ ಮುಂದೆ ಸ್ಪಷ್ಟೀಕರಣ ನೀಡಲಿದ್ದಾರೆ.

'ಅಕ್ರಮ ಗಣಿ ವರದಿ ಸೋರಿಕೆಯಾಗಿರುವ ವಿಷಯ ತಿಳಿದು ನನಗೆ ತುಂಬಾ ನೋವಾಗಿದೆ. ಇದು ಲೋಕಾಯುಕ್ತ ಕಚೇರಿಯಿಂದ ಅಥವಾ ನಮ್ಮ ತನಿಖಾಧಿಕಾರಿಗಳಿಂದ ಸೋರಿಕೆಯಾಗಿಲ್ಲ. ಆದರೆ ವರದಿ ಮಾಹಿತಿಗಳನ್ನು ಯಾರು ಸೋರಿಕೆ ಮಾಡಿದ್ದಾರೊ ಎನ್ನುವುದು ಕೂಡ ನನಗೆ ಗೊತ್ತಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಈ ಕುರಿತು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ. ಬಹಳಷ್ಟು ಶ್ರಮ ವಹಿಸಿ ಸಿದ್ಧಪಡಿಸಿರುವ ವರದಿ ಈ ರೀತಿ ಸೋರಿಕೆಯಾಗಿರುವುದರಿಂದ ಮನಸ್ಸಿಗೆ ತುಂಬಾ ನೋವಾಗಿದೆ' ಎಂದು ಲೋಕಾಯುಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.

English summary
Lokayukta Justice Santosh Hegde illegal mining report leaked- lokayukta Hegde says sorry
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X