ದೊಡ್ಡ ವಿಮಾನ ಖರೀದಿಗೆ ಏರ್ ಇಂಡಿಯಾ 3,745 ಕೋಟಿ ಸಾಲ

ಈ ವಿಮಾನಗಳಿಗೆ ಜಪಾನಿನ ಎಎನ್‌ಏ ಕಂಪೆನಿ ನಂತರ ಏರ್ ಇಂಡಿಯಾ ಎರಡನೇ ಗ್ರಾಹಕನಾಗಿದೆ. ಏರ್ ಇಂಡಿಯಾ ಅಮೇರಿಕಾದ ಎಕ್ಸಿಮ್ ಬ್ಯಾಂಕ್ ಗ್ಯಾರಂಟಿಯ ಮೂಲಕ ಈ ವಿಮಾನಗಳ ಖರೀದಿಗೆ ಯೋಜನೆ ಹಾಕಿಕೊಂಡಿದ್ದು ಒಟ್ಟು 27 ಬೋಯಿಂಗ್ ವಿಮಾನಗಳ ಖರೀದಿಗಾಗಿ ಆರ್ಡರ್ ನೀಡಿದೆ. ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಈ ವಿಮಾನಗಳ ಖರೀದಿ ಸಾಲಕ್ಕೆ 50 ರಿಂದ 70 ಮೂಲ ಅಂಶಗಳಷ್ಟು ಬಡ್ಡಿ ದರ ನೀಡಲಿದೆ.
ಈ ಖರೀದಿಗೆ ಒಟ್ಟು ಶೇ 85 ರಷ್ಟು ಸಾಲ ಪಡೆಯಲಾಗುತ್ತಿದ್ದು , ಇವುಗಳ ಆಯಸ್ಸು 12 ವರ್ಷಗಳಾಗಿವೆ. ಈ ವಿಮಾನಗಳನ್ನು ಯೂರೋಪ್ ಹಾಗೂ ಏಷ್ಯಾದ ಮಾರ್ಗಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಮಾರುಕಟ್ಟೆ ಪಾಲನ್ನು ಮರಳಿ ಗಳಿಸುವ ಗುರಿ ಹೊಂದಲಾಗಿದೆ. ಏರ್ ಇಂಡಿಯಾ 40,000 ಕೋಟಿ ರೂಪಾಯಿಗಳಷ್ಟು ಸಾಲವನ್ನು ಹೊಂದಿದ್ದು ಇದರಲ್ಲಿ ದುಡಿಯುವ ಬಂಡವಾಳದ ಸಾಲ ಶೇ 50 ರಷ್ಟಿದೆ.
ಈಗ ಏರ್ ಇಂಡಿಯಾ ನೀಡಬೇಕಿರುವ ಸಾಲದ ಕಂತು 4,489 ಕೋಟಿ ರೂಪಾಯಿಗಳಷ್ಟಿದ್ದು ಇದರ ಗಡುವು ಮುಗಿದಿದ್ದು ಸರ್ಕಾರ ಹಣಕಾಸಿನ ನೆರವು ನೀಡದಿದ್ದರೆ ಇದು ಬಾಕಿದಾರನಾಗಲಿದೆ.
ಏರ್ ಇಂಡಿಯಾ ಸರ್ಕಾರಕ್ಕಾಗಿ ಮೀಸಲಾಗಿರಿಸಿರುವ 3 ಅತೀ ಗಣ್ಯರ ವಿಮಾನ ಗಳ ನಿರ್ವಹಣೆ ಹಾಗೂ ಪ್ರಯಾನ ರದ್ದಾದ ಬಾಬ್ತು 1173 ಕೋಟಿ ರೂಪಾಯಿಗಳ ಬಾಕಿ ನೀಡುವಂತೆ ಸರ್ಕಾರವನ್ನು ಕೋರಿದ್ದು ಇದರಿ ನಿರ್ವಹಣೆಗಾಗಿ 800 ಕೋಟಿ ರೂಪಾಯಿಗಳನ್ನು ಕೋರಿದೆ. ಇದಕ್ಕೆ ಸರ್ಕಾರ 450 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವದಾಗಿ ಒಪ್ಪಿಗೆ ನೀಡಿದೆ.












Click it and Unblock the Notifications