ಒಂಟೆಗೆ ಮಂಗಳಾರತಿ ಎತ್ತಿದ ಭಾರಧ್ವಾಜ ಸ್ವಾಮೀಜಿ

ಬಾಣಸವಾಡಿಯ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಅಂಬತ್ತೂರಿನ ಶ್ರೀಯೋಗಮಾಯಾ ಭುವನೇಶ್ವರೀ ಪೀಠದ ಪರಮಹಂಸ ಭಾರಧ್ವಾಜ ಸ್ವಾಮೀಜಿ ಅವರು ಎರಡು ಒಂಟೆಗಳಿಗೆ ಪೂಜೆ ನೆರವೇರಿಸಿದರು.[ಗ್ಯಾಲರಿ:ಒಂಟೆಗೆ ಪುಷ್ಪಾರ್ಚನೆ]
ನಾವು ದನಕರುಗಳಿಗೆ ಪೂಜೆ ಮಾಡುತ್ತೇವೆ. ಅದು ನಮ್ಮ ಕರ್ತವ್ಯ. ಗೋವಿನಲ್ಲಿ ಕಾಣುವ ಪೂಜ್ಯ ಭಾವನೆಯನ್ನು ಇತರ ಪ್ರಾಣಿಗಳಲ್ಲೂ ಕಾಣಬೇಕು, ಈ ಎಲ್ಲ ಪ್ರಾಣಿಗಳಲ್ಲಿ ಭಗವಂತನನ್ನು ಕಂಡಾಗ ಮನುಷ್ಯನಿಗೆ ನೆಮ್ಮದಿ ಸಿಗಲು ಸಾಧ್ಯ ಎಂದು ಸ್ವಾಮೀಜಿ ಅವರು ಹೇಳಿದರು.
ಹಿನ್ನೆಲೆ: ಒಂಟೆಗೆ ವಿಶೇಷವಾಗಿ ಪೂಜೆ ಸಲ್ಲಿಸಲು ಕಾರಣ ಇದೆ. ಮರುಭೂಮಿಯ ಹಡಗು ಎಂದೇ ಹೆಸರಾದ ಒಂಟೆಗಳು ಪ್ರಾಚೀನ ಕಾಲದಲ್ಲಿ ಸಾಮಗ್ರಿಗಳನ್ನು ಒಂದೂರಿನಿಂದ ಮತ್ತೊಂದು ಊರಿಗೆ ಸಾಗಿಸಲು ಬಳಸಲಾಗುತ್ತಿದ್ದ ವಾಹನವಾಗಿತ್ತು.
ಸರಕು ಸಾಗಾಟದಲ್ಲಿ ಕುದುರೆ, ಒಂಟೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಅವುಗಳು ಇಲ್ಲದಿದ್ದರೆ ಮನುಷ್ಯನ ಯಾವ ಕೆಲಸಗಳೂ ನಡೆಯುತ್ತಿರಲಿಲ್ಲ. ಪ್ರಾಣಿಗಳಿಗೆ ಹಿಂಸೆ ನೀಡದೆ ಇರುವುದೇ ಮಾನವ ಧರ್ಮ ಎಂದು ನಮ್ಮ ಪೂರ್ವಿಕರು ನಂಬಿದ್ದರು. ಋಗ್ವೇದದಲ್ಲಿ ಕೂಡ ಕುದುರೆ, ಒಂಟೆಗಳಿಗೆ ಪೂಜೆ ಸಲ್ಲಿಸಲಾಗುತ್ತಿದ್ದ ಉಲ್ಲೇಖ ಇದೆ.
ಆಧುನಿಕ ಸೌಲಭ್ಯಗಳು ಬರುವ ಮೊದಲು ಮನುಷ್ಯ ಸರಕು ಸಾಗಾಟ ಸಹಿತ ತನ್ನ ದಿನನಿತ್ಯದ ಅದೆಷ್ಟೋ ಕೆಲಸ ಕಾರ್ಯಗಳಿಗೆ ಪ್ರಕೃತಿ, ಪ್ರಾಣಿಗಳನ್ನು ಅವಲಂಬಿಸಿದ್ದ. ಆ ಉಪಕಾರ ಸ್ಮರಣೆಯನ್ನು ಮುಂದೆಯೂ ಮರೆಯಬಾರದು.
ಪ್ರಾಣಿಗಳ ವಧೆ, ಅವುಗಳಿಗೆ ಹಿಂಸೆ ನೀಡುವುದರ ಬದಲಿಗೆ ಅವುಗಳನ್ನು ಬದುಕಲು ಬಿಡಬೇಕು ಎಂಬ ಸಂದೇಶ ಸಾರುವುದಕ್ಕಾಗಿಯೇ ಈ ಒಂಟೆ ಪೂಜೆ ನಡೆಯಿತು. ಈ ರೀತಿ ಹಲವು ವಿಶೇಷ ರೀತಿಯ ಪೂಜೆಗಳನ್ನು ಮಾಡಲು ಸ್ವಾಮೀಜಿ ಉತ್ಸುಕರಾಗಿದ್ದಾರೆ. ಹೆಚ್ಚಿನ ಮಾಹಿತಿಗೆ 09884677555 ಸಂಪರ್ಕಿಸಬಹುದು.












Click it and Unblock the Notifications