ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಕ್ ಡೊವೆಲ್ ಜಾಹೀರಾತು ನಿಲ್ಲಿಸುವುದಿಲ್ಲ ಮಲ್ಯ ಕಿಕ್

By Mahesh
|
Google Oneindia Kannada News

Vijay Mallya replies to Bhajji's notice
ಬೆಂಗಳೂರು ಜು 19: ವಿವಾದಿತ ಮೆಕ್ ಡೊವೆಲ್ ನಂ.1 ಸೋಡಾ ಜಾಹೀರಾತನ್ನು ನಿಲ್ಲಿಸುವುದಿಲ್ಲ ಎಂದು ಯುಬಿ ಸಮೂಹದ ಅಧ್ಯಕ್ಷ ಡಾ. ವಿಜಯ್ ಮಲ್ಯ ಹೇಳಿದ್ದಾರೆ. ಜಾಹೀರಾತಿನ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ ಹರ್ಭಜನ್ ಅವರ ತಾಯಿ ಹಾಗೂ ವಕೀಲರು ನೀಡಿದ್ದ ನೋಟಿಸ್ ಗೆ ಉತ್ತರವಾಗಿ ಮಲ್ಯ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಮೆಕ್ ಡೊವೆಲ್ಸ್ ನಂ.1 ಪ್ಲಾಟಿನಮ್ ಜಾಹೀರಾತಿನಿಂದ ನನ್ನ ಪುತ್ರ ಹರ್ಭಜನ್ ಸಿಂಗ್ ಹಾಗೂ ನಮ್ಮ ಕುಟುಂಬದ ಮರ್ಯಾದೆ ಹಾಳುಗುತ್ತದೆ. ಅಲ್ಲದೆ , ನನ್ನ ಹಾಗೂ ಧೋನಿ ನಡುವೆ ಅನಗತ್ಯ ಸಂಘರ್ಷಕ್ಕೆ ನಾಂದಿ ಹಾಡುತ್ತದೆ ಎಂದು ಹರ್ಭಜನ್ ಸಿಂಗ್ ತಾಯಿ ಅವತಾರ್ ಕೌರ್ ಅವರು ದೆವಾನಿ ಅಡ್ವೋಕೇಟ್ಸ್ ಹಾಗೂ ಕನ್ಸಲೆಂಟ್ಸ್ ಮೂಲಕ ಮಲ್ಯ ಅವರ ಯುಬಿ ಗ್ರೂಪ್ ಗೆ ನೋಟಿಸ್ ಕಳಿಸಿದ್ದರು. [ಇಂಗ್ಲೆಂಡ್ ಪ್ರವಾಸ ವೇಳಾಪಟ್ಟಿ]

ಮೂರು ದಿನದೊಳಗೆ ಕ್ಷಮಾಪಣೆ ಎಲ್ಲಾ ಪ್ರಮುಖ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ಪ್ರಕಟವಾಗಬೇಕು. ಹರ್ಭಜನ್ ಕುಟುಂಬಕ್ಕೆ ಪರಿಹಾರ ಧನ ರೂಪದಲ್ಲಿ 1 ಲಕ್ಷ ರೂ ನೀಡಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಹರ್ಭಜನ್ ಅವರ ವಕೀಲರು ಹೇಳಿದ್ದರು.

ಇದಕ್ಕೆ ಉತ್ತರಿಸಿರುವ ಡಾ.ಮಲ್ಯ ಮೆಕ್ ಡೊವೆಲ್ ಗೆ ಪ್ರತಿಸ್ಪರ್ಧಿಯಾಗಿರುವ ರಿಕಾರ್ಡ್ಸ್ ನ ರಾಯಲ್ ಸ್ಟ್ಯಾಗ್ ವಿಸ್ಕಿಗೆ ಚುರುಕು ಮುಟ್ಟಿಸಲು, ಅಣಕವಾಡಲಾಗಿದೆ. ಹರ್ಭಜನ್ ಅವರ ಮೇಲೆ ವೈಯಕ್ತಿಕವಾಗಿ ಈ ಜಾಹೀರಾತು ಚಿತ್ರಿಸಿಲ್ಲ. ನೋಟಿಸ್ ಗೆ ನಮ್ಮ ಲಾಯರ್ ಗಳು ಉತ್ತರಿಸಲಿದ್ದಾರೆ. ರಾಜಕಾರಣಿಗಳನ್ನು ಅಣಕವಾಡುವ ನೂರು ಜಾಹೀರಾತುಗಳಿವೆ ಯಾರೋ ಆ ಬಗ್ಗೆ ಪ್ರಶ್ನಿಸಿದ ನೆನಪಿಲ್ಲ ಎಂದು ಮಲ್ಯ ಹೇಳಿದ್ದಾರೆ.

English summary
The controversial McDowell's No 1 advertisement will not be called off air, said UB Group Chairman, Vijay Mallya. Earlier Harbhajan Singh's mother, Avtar Kaur sent a notice to the UB group over a television advertisement that features him and Indian cricket team Captain, Mahendra Singh Dhoni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X