ಉಡುಪಿ ರೈಲು ನಿಲ್ದಾಣದಲ್ಲಿ ಪ್ರೀಪೇಡ್ ಟ್ಯಾಕ್ಸಿ ಸೇವೆ ಶೀಘ್ರ

ಪ್ರೀಪೇಡ್ ಬೂತ್ ಇಲ್ಲದ್ದರಿಂದ ಗ್ರಾಹಕರಿಂದ ಆಟೋ - ಟ್ಯಾಕ್ಸಿ ಚಾಲಕರು ಹೆಚ್ಚಿನ ದರ ವಸೂಲಿ ಮಾಡುತ್ತಾರೆಂಬ ಆರೋಪಕ್ಕೆ ತೆರೆ ಬೀಳಲಿದೆ. ಎರಡು ಬಸ್ಸುಗಳು ರಾತ್ರಿ ರೈಲು ನಿಲ್ದಾಣದಲ್ಲಿ ತಂಗಿ, ಬೆಳಗ್ಗೆ ಹೊರಡುತ್ತವೆ. ಇದು ಬೆಳಗ್ಗೆ ರೈಲಿನಲ್ಲಿ ಬರುವವರಿಗೆ ಮಾತ್ರ ಅನುಕೂಲವಾಗುತ್ತದೆ.
ಒಂದು ಸಿಟಿ ಬಸ್‌ಗೆ ಪರ್ಮಿಟ್ ಇದ್ದರೂ ಇದು ಬರುವಾಗ ಕೆಲವು ನಿಮಿಷ ವ್ಯತ್ಯಾಸವಾದರೂ ರಿಕ್ಷಾದವರು ಅಡ್ಡಿಪಡಿಸುತ್ತಾರೆ. ಹೀಗಾಗಿ ರೈಲು ನಿಲ್ದಾಣಕ್ಕೆ ಬಸ್ ಸೇವೆ ಸಮರ್ಪಕವಾಗಿಲ್ಲ. ರೈಲು ಬರುವ ಸಮಯ ಬಸ್ ಸೇವೆ ಒದಗಿಸಲು ಸೂಕ್ತವಾಗಿಲ್ಲದೆ ಇರುವುದೂ ಇದಕ್ಕೆ ಒಂದು ಕಾರಣ.
ರಾತ್ರಿ ವೇಳೆ ಬರುವ ಬಂದಿಳಿಯುವ ಪ್ರಯಾಣಿಕರು ಉಡುಪಿ, ಮಣಿಪಾಲಕ್ಕೆ ಹೋಗುವಾಗ ಬಾಡಿಗೆ ವಾಹನದಲ್ಲಿ ಹೋಗಬೇಕು. ಇಂದ್ರಾಳಿವರೆಗೆ ಕರೆದೊಯ್ಯಲು ಬಹುತೇಕ ಸಂದರ್ಭ ರಿಕ್ಷಾದವರು ಒಪ್ಪುವುದಿಲ್ಲ, ದೂರದೂರಿಗೆ ಕರೆದೊಯ್ಯುವುದಾದರೆ ಮಾತ್ರ ಇವರು ಒಪ್ಪುತ್ತಾರೆಂಬ ಮಾತೂ ಕೇಳಿಬರುತ್ತಿದೆ.
ಗ್ರಾಹಕರಿಗೆ ಆಗುತ್ತಿದ್ದ ತೊಂದರೆಯನ್ನು ಗಮನಿಸಿದ ರೈಲ್ವೆ ಯಾತ್ರೀ ಸಂಘದ ಅಧ್ಯಕ್ಷ ಆರ್.ಎಲ್.ಡಾಯಸ್ ಅವರು ಕೊಂಕಣ ರೈಲ್ವೆಯ ಕೇಂದ್ರ ಕಚೇರಿ ಬೇಲಾಪುರಕ್ಕೆ ಹೋಗಿ ಆಡಳಿತ ನಿರ್ದೇಶಕರು, ಮುಖ್ಯ ವಾಣಿಜ್ಯ ವ್ಯವಸ್ಥಾಪಕರನ್ನು ಕಂಡು ಪ್ರೀಪೇಡ್ ಬೂತ್ ಸ್ಥಾಪಿಸಲು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಮಾರ್ಚ್ ತಿಂಗಳಲ್ಲಿ ಟೆಂಡರ್ ಕರೆದು ಗುತ್ತಿಗೆ ವಹಿಸಲಾಗಿತ್ತು.












Click it and Unblock the Notifications