ಡಿಎಂಕೆ ಕಾರ್ಯಕಾರಿಣಿ ಬಿರುಗಾಳಿಯಲ್ಲಿ ಪತರಗುಟ್ಟುವ ಸಾಧ್ಯತೆ
ಚೆನ್ನೈ,
ಜುಲೈ 18: ಈಗಾಗಲೇ ಹಗರಣಗಳಿಗೆ ಸಿಲುಕಿ ಪತರಗುಟ್ಟುತ್ತಿರುವ ಡಿಎಂಕೆ ಎಂಬ ಹಡಗಿಗೆ ಲಂಗರು ಹಾಕುವ ನಾವಿಕನಾರು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪಕ್ಷವು ಇದೇ ತಿಂಗಳು 23 ಹಾಗೂ 24 ರಂದು ಕೊಯಮತ್ತೂರಿನಲ್ಲಿ ಕಾರ್ಯಕಾರಿಣಿ ಸಭೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾರಿ ಬಿರುಗಾಳಿ ಎದ್ದೇಳುವ ನಿರೀಕ್ಷೆ ಇದೆ. id="toptextpromo">ಪಕ್ಷವು
ಕರುಣಾನಿಧಿ ಉತ್ತರಾಧಿಕಾರಿ ಸಂಬಂಧ ಪುತ್ರರ ನಡುವಣ ಕಾಳಗದಿಂದ ಅಡಕತ್ತರಿಯಲ್ಲಿ ಸಿಲುಕಿದೆ. 2 ಜಿ ಹಗರಣ ಮತ್ತು ವಿಧಾನಸಭೆಯಲ್ಲಿ ಪಕ್ಷದ ಹೀನಾಯ ಸೋಲಿನಿಂದ ಪಕ್ಷ ಧೃತಿಗೆಟ್ಟಿದೆ. ಈಗಾಗಲೇ ಪುತ್ರ ಎಂಕೆ ಸ್ಟಾಲಿನ್ ಈ ಬಗ್ಗೆ ಸಾಕಷ್ಟು ರಾದ್ಧಾಂತ ಎಬ್ಬಿಸಿದ್ದಾನೆ. ಅತ್ತ ಅಳಗಿರಿ ಇತ್ತ ಕನಿಮೋಳಿಯಿಂದಾಗಿ ಕರುಣಾಗೆ ಧರ್ಮಸಂಕಟಗಳು ಹೆಚ್ಚಾಗಿವೆ. id='are-slot-1' class='oiad oi-axt oiadv'> id='top-searched-articles'>ಇಂತಹ
ಸಂಕಷ್ಟ ಸಮಯದಲ್ಲಿ ತಮ್ಮ ರಾಜಕೀಯ ಕಾರ್ಯದರ್ಶಿ, ಬಲಗೈ ಬಂಟ ಕೆ. ಷಣ್ಮುಗನಾಥನ್ ಅವರನ್ನು ಕರುಣಾನಿಧಿ ಹೆಚ್ಚಾಗಿ ಅವಲಂಬಿಸುತ್ತಾರೆ. ಆದರೆ ಅವರಿಗೂ ಹೇಳದೆ ಕೇಳದೆ ಕರುಣಾನಿಧಿ ಮಗನೊಂದಿಗೆ ಮುನಿಸಿಕೊಂಡು ಶಾಂತಿಯನ್ನರಸಿ ಮಹಾಬಲಿಪುರಂನಲ್ಲಿರುವ ರೆಸಾರ್ಟಿಗೆ ಏಕಾಂಗಿಯಾಗಿ ಪಾದ ಬೆಳೆಸಿದ್ದಾರೆ. ಕಳೆದ ವಾರ ಈ ಬೆಳವಣಿಗೆಗಳು ನಗರದಲ್ಲಿರುವ ಅಣ್ಣಾ ಅರಿವಾಲಯಂ ಪ್ರಧಾನ ಕಚೇರಿಯಲ್ಲಿ ನಡೆದಾದ ಬಳಿಕ, ಸ್ಟಾಲಿನ್ ಸಹ ಸಿಟ್ಟಿಗೆದ್ದು ಹೊರನಡೆದಿದ್ದಾರೆ ಎಂದು ಮೂಲಗಳು ಹೇಳಿವೆ.











Click it and Unblock the Notifications