ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಫೋಟದಲ್ಲಿ ಆರೆಸ್ಸೆಸ್ ಕೈವಾಡ: ಉಲ್ಟಾ ಹೊಡೆದ ದಿಗ್ವಿಜಯ

By Mahesh
|
Google Oneindia Kannada News

BJP Slams Digvijay Singh
ನವದೆಹಲಿ ಜು 17: ವಾಣಿಜ್ಯ ನಗರಿ ಮುಂಬಯಿಯಲ್ಲಿ ಜು 13ರಂದು ಸಂಭವಿಸಿದ ಸರಣಿ ಸ್ಫೋಟದಲ್ಲಿ ಹಿಂದೂ ಪರ ಸಂಘಟನೆಗಳ ಕೈವಾಡವಿದೆ ಎಂದು ಹೇಳಿದ್ದ ಕಾಂಗೆರ್ಸ್ ನಾಯಕ ದಿಗ್ವಿಜಯ ಸಿಂಗ್ ಈಗ ಉಲ್ಟಾ ಹೊಡೆದಿದ್ದಾರೆ. ನಾನು ಹಾಗೆ ಹೇಳಲೇ ಇಲ್ಲ. ಜು 13ರ ಸ್ಫೋಟದಲ್ಲಿ ಆರೆಸ್ಸೆಸ್ ಕೈವಾಡ ಇಲ್ಲದಿರಬಹುದು, ಆದರೆ, ಆರೆಸ್ಸೆಸ್ ಭಯೋತ್ಪಾದನೆ ಬಗ್ಗೆ ಸಾಕಷ್ಟು ಸಾಕ್ಷ್ಯ ಒದಗಿಸಬಲ್ಲೇ ಎಂದು ಮಾಧ್ಯಮಗಳ ಮುಂದೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ಆರೆಸ್ಸೆಸ್‌ ಕಾರ್ಯಕರ್ತ ಸುನಿಲ್‌ ಜೋಶಿ ಹತ್ಯೆ ಪ್ರಕರಣದಲ್ಲಿ ಕೆಲವು ಬಿಜೆಪಿ ನಾಯಕರು ಭಾಗಿಯಾಗಿದ್ದರು ಎಂಬುದು ಎನ್‌ಐಎ ತನಿಖೆಯಿಂದ ಬಹಿರಂಗಗೊಂಡಿದೆ. ಮಲೇಂಗಾವ್ ಸ್ಫೋಟದ ಬಗ್ಗೆ ಎಲ್ಲರಿಗೂ ತಿಳಿದಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಾದ್ದಲ್ಲಿ ಕೋರ್ಟ್‌ ಗೆ ಎಲ್ಲಾ ಮಾಹಿತಿ ನೀಡಲು ಸಿದ್ಧ. ಜು 13 ಸ್ಫೋಟ ಪ್ರಕರಣದ ವಿಚಾರಣೆ ಕೈಗೊಳ್ಳಲು ಎನ್‌ಐಎ ಹಾಗೂ ಮಹಾರಾಷ್ಟ್ರದ ಉಗ್ರ ನಿಗ್ರಹ ತಂಡಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಕಾದು ನೋಡಿ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ದಿಗ್ವಿಜಯ್‌ ಸಿಂಗ್‌ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆರೆಸ್ಸೆಸ್‌ ದೇಶಪ್ರೇಮಿ ಸಂಘಟನೆಯೇ ಹೊರತು ದೇಶದ್ರೋಹಿಯಲ್ಲ. ದಿಗ್ವಿಜಯ್‌ ಸಿಂಗ್‌ ಹೇಳಿಕೆ ಭಯೋತ್ಪಾದಕ ಸಂಘಟನೆಗಳಿಗೆ ನೆರವಾಗಲಿದೆ. ಎನ್ ಐಎ ತನಿಖೆಯ ದಿಕ್ಕು ತಪ್ಪಿಸುತ್ತದೆ ಎಂದು ಬಿಜೆಪಿ ವಕ್ತಾರ ಸಯ್ಯದ್‌ ಶಾನವಾಜ್‌ ಹುಸೇನ್‌ ಹೇಳಿದ್ದಾರೆ.

English summary
Bharatiya Janta Party slammed Congress General Secretary Digvijay Singh for his comments that the involvement of Hindu outfits in Mumbai blasts 2011. Digvijay reacted strongly and said I said RSS not involved in this blasts but in other cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X