ಮಂಚನಬೆಲೆಯಲ್ಲಿ ಮಜಾ ಮಾಡಲು ಹೋಗಿ ಮುಳುಗಿದರು

ನೀರಿನ ಆಳ ತಿಳಿಯದೆ ಮಟಮಟ ಮಧ್ಯಾಹ್ನ ನೀರಿಗಿಳಿದ ಬಿಎಸ್ ಇ ಐದನೇ ಸೆಮಿಸ್ಟರ್ ನ ವಿದ್ಯಾರ್ಥಿಗಳು, ಸುಳಿಗೆ ಸಿಕ್ಕು ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಸಿಲುಕಿದ್ದ ಮಾನಸ ಹಾಗೂ ಹರ್ಷಿತಾಳನ್ನು ಉಳಿಸಲು ಸ್ಥಳೀಯರು ಪ್ರಯತ್ನಪಟ್ಟಿದ್ದಾರೆ. ಆದರೆ, ಅಷ್ಟರಲ್ಲಿ ಇಬ್ಬರ ದೇಹ ಮುಳುಗಿ ಕಣ್ಮರೆಯಾಗಿದೆ. ಸಂಜೆ ವೇಳೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ಇಬ್ಬರ ಶವವನ್ನು ಹೊರತೆಗೆಯಲಾಗಿದೆ.
ವಿಜಯನಗರದ ಆರ್ ಪಿಸಿ ಲೇಔಟ್ ನ ನಿವಾಸಿ ಹರ್ಷಿತಾ ಕೆಎಲ್ ಇ ಕಾಲೇಜಿನಲ್ಲಿ ಓದುತ್ತಿದ್ದಾರೆ ಉಳಿದಂತೆ ಸುಂಕದ ಕಟ್ಟೆ ನಿವಾಸಿ ಮಾನಸ ಹಾಗೂ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಓದುತ್ತಿರುವ ಗೆಳೆಯ ಗೆಳತಿಯರು ಒಟ್ಟು ಎಂಟು ಜನ ಮೂರು ಬೈಕ್ ಗಳನ್ನು ಹತ್ತಿ ಜಾಲಿ ಟ್ರಿಪ್ ಗಳಾಗಿ ಮಂಚನಬೆಲೆಗೆ ಬಂದಿದ್ದರು.
ಪ್ರಜ್ಞೆ ತಪ್ಪಿದ್ದ ಲಾವಣ್ಯ, ಸ್ವಪ್ನ, ಚೇತನ್, ತನ್ಮಯ, ಮನೋಜ್ ಹಾಗೂ ಅರ್ಷಿತಾ ಸದ್ಯಕ್ಕೆ ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾವರೆಕೆರೆ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications