ಉಗ್ರರನ್ನು ಮಟ್ಟಹಾಕಲು ಮುಂಬೈನಲ್ಲಿ ಸಿಂಗ್ ಪಣ

PM assures action against perpetrators in Mumbai
ಮುಂಬೈ, ಜು. 15 : ಭೀಕರ ಸರಣಿ ಬಾಂಬ್ ಸ್ಫೋಟದಿಂದ ಜರ್ಝರಿತವಾದ ಮುಂಬೈಗೆ ಸಾಂತ್ವನದ ಬಾಮ್ ಹಚ್ಚಲು ಪ್ರಧಾನಿ ಡಾ. ಮನಮೋಹನ ಸಿಂಗ್ ಮತ್ತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಗುರುವಾರ ಸಂಜೆ ಬಂದಿದ್ದರು.

"ಈ ಘಟನೆಯಿಂದ ಮುಂಬೈನ ಜನತೆಗೆ ಆಗಿರುವ ಆಘಾತ ಮತ್ತು ಜನತೆಯಲ್ಲಿ ಎದ್ದಿರುವ ಆಕ್ರೋಶ ನನಗೆ ಅರ್ಥವಾಗುತ್ತದೆ. ನಿಮ್ಮ ನೋವು, ವೇದನೆಯಲ್ಲಿ ನಾನೂ ಭಾಗಿಯಾಗಿದ್ದೇನೆ" ಎಂದು ಎಂದಿನಂತೆ ಶಾಂತವಾಗಿ ನುಡಿದರು.

ಉಗ್ರರನ್ನು ಆದಷ್ಟು ಬೇಗನೆ ಹಿಡಿದು, ಕಾನೂನಿನ ಚೌಕಟ್ಟಿನಲ್ಲಿ ತರಲು ಆದಷ್ಟು ಬೇಗನೆ ಯತ್ನಿಸುತ್ತೇವೆ ಎಂದು ಹೇಳಿದ ಅವರು, ಭವಿಷ್ಯದಲ್ಲಿ ಇಂಥ ಘಟನೆ ಮರುಕಳಿಸದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ಸಿಂಗ್ ಮತ್ತು ಸೋನಿಯಾ ಸೈಫಿ ಮತ್ತು ಜೆಜೆ ಆಸ್ಪತ್ರೆಗಳಿಗೆ ತೆರಳಿ ಗಾಯಗೊಂಡ ರೋಗಿಗಳಿಗೆ ಸಾಂತ್ವನ ಹೇಳಿದರು. ಜು.13ರ ಸಂಜೆ ನಡೆದ ಸರಣಿ ಅಪಘಾತದಲ್ಲಿ ಒಟ್ಟು 17 ಸತ್ತು, 131 ಜನ ಗಾಯಗೊಂಡಿದ್ದಾರೆ. ಈ ಘಟನೆ ಹೇಗಾಯಿತು, ಯಾರು ಮಾಡಿದರು ಎಂಬ ಬಗ್ಗೆ ಚಿದಂಬರಂಗೆ ಇನ್ನೂ ಸುಳಿವು ಸಿಕ್ಕಿಲ್ಲ.

ಘಟನೆ ನಡೆದ 12 ನಿಮಿಷಗಳಲ್ಲೇ ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ, "ಇದು ಇಂಟೆಲಿಜೆನ್ಸ್ ವೈಫಲ್ಯವಲ್ಲ, ಕಾಂಗ್ರೆಸ್ ನೀತಿಯ ವೈಫಲ್ಯ" ಎಂದು ಕೆಂಡ ಕಾರಿದ್ದರು. ಭಯೋತ್ಪಾದನೆಗೆ ಸಂಬಂಧಿಸಿದಂತೆ ಕನಿಷ್ಠ ಸಹಿಷ್ಣುತಾ ನೀತಿಯನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+