ಶಿರಾ ಬಳಿ ಮತ್ತೆ ಅಪಘಾತ: 3 ಪೊಲೀಸರು ಸ್ಥಳದಲ್ಲೇ ಸಾವು
ತುಮಕೂರು,
ಜುಲೈ13: ಬುಧವಾರ ಬೆಳಗ್ಗೆ ಬೆಳಗ್ಗೆ ಶಿರಾ ಬಳಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪಟ್ಟಣದಲ್ಲಿ ನಿಂತಿದ್ದ ಲಾರಿಗೆ ಪೊಲೀಸ್ ಜೀಪು ಡಿಕ್ಕಿ ಹೊಡೆದು ಮೂವರು ಪೊಲೀಸರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. NH4 ದಿನೇ ದಿನೆ ಸಾವಿನ ಕೂಪವಾಗುತ್ತಿರುವುದಕ್ಕೆ ಇದು ಇನ್ನೊಂದು ಉದಾಹರಣೆಯಾಗಿದೆ. id="toptextpromo">ಕೆಟ್ಟು
ರಸ್ತೆಯಲ್ಲಿ ನಿಂತಿದ್ದ ಲಾರಿಗೆ ರಭಸದಿಂದ ಬಂದ ಪೊಲೀಸ್ ಜೀಪು ಅಪ್ಪಳಿಸಿತು. ಬೆಳಗ್ಗೆ 9.45ಕ್ಕೆ ಘಟನೆ ಸಂಭವಿಸಿದೆ. ಲಾರಿಯೊಳಕ್ಕೆ ನುಗ್ಗಿರುವ ಜೀಪನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಕೆ.ಆರ್. ಸುರೇಶ್ ಗೌಡ ಸ್ಥಳಕ್ಕೆ ದೌಡಾಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮೃತರು
ಕೊಪ್ಪಳ ಜಿಲ್ಲೆಯ ಮುನಿರಾಬಾದಿನ ಇಂಡಿಯನ್ ರಿಸರ್ವ್ ಬೆಟಾಲಿಯನ್ (IRB) ತರಬೇತಿ ಕೇಂದ್ರದವರು. ಐಜಿ ಬಸವರಾಜ್ ಹಳ್ಳುರು, ಪೇದೆ ಸತ್ಯಾನಾರಾಯಣ ಹಾಗೂ ಚಾಲಕ ಕಾಸರಕಿ ಅಸುನೀಗಿದ ದುರ್ದೈವಿಗಳು. ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇವರೆಲ್ಲ ಚಳ್ಳಕೆರೆ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದರು.











Click it and Unblock the Notifications