ಸಾವು ನೋವು ಸಂಖ್ಯೆ ಹೆಚ್ಚಾಗುವ ಆತಂಕ

ಓಪೆರಾ ಹೌಸ್ ಪ್ರದೇಶದಲ್ಲಿ ಹೆಚ್ಚಿನ ಹಾನಿಯಾಗಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸೂಚನೆಗಳು ದಟ್ಟವಾಗಿವೆ ಎಂದು ಮುಂಬೈ ಮಾಧ್ಯಮಗಳು ಹೇಳಿವೆ. [ವಿಡಿಯೋ 1]
ಸ್ಫೋಟದ ನಂತರ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಮತ್ತು ಪ್ರಧಾನಿ ಡಾ. ಸಿಂಗ್ ಉನ್ನತ ಮಟ್ಟದ ಸಭೆ ಕರೆದು ಚರ್ಚಿಸುತ್ತಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಜತೆ ಚರ್ಚಿಸಿ ಮುಂದಿನ ಎಚ್ಚರಿಕೆ ಕ್ರಮ ಕುರಿತು ಸೂಚನೆಗಳನ್ನು ನೀಡುತ್ತಿದ್ದಾರೆ. [ವಿಡಿಯೋ 2]
ಸ್ಫೋಟದಲ್ಲಿ ಗಾಟಗೊಂಡವರನ್ನು ಜೆಜೆ, ಜಿಟಿ ಮತ್ತು ಕೆಇಎಂ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈಗ ತಾನೆ ಬಂದ ಸುದ್ದಿ ಪ್ರಕಾರ 17 ಮಂದಿ ಮೃತ ಪಟ್ಟಿದ್ದಾರೆ. [ವಿಡಿಯೋ 3]












Click it and Unblock the Notifications