ಆಕಾಶಕ್ಕೆ ಏಣಿ ಹಾಕಿದ್ದ ನಟಿ ಮರಳಿ ಬಾರದ ಲೋಕಕ್ಕೆ...

31 ವರ್ಷದ ವಿಜಯ ರಾವತ್ ಎಂಬ ಭುವನೇಶ್ವರದ ಬೆಡಗಿಯೊಬ್ಬಳು ಬಾಲಿವುಡ್ ನ ಥಳಕುಬಳಕಿಗೆ ಮಾರುಹೋಗಿ ಮೂರು ವರ್ಷದ ಹಿಂದೆ ಸೀದಾ ಮುಂಬೈ ಟ್ರೈನ್ ಹತ್ತಿದಳು. ಆದರೆ ದೊಡ್ಡ ನಟಿಯಾಗಬೇಕೆಂದು ಬಂದವಳಿಗೆ ಬಾಲಿವುಡ್ ಸೈಡ್ ನಟಿಯಾಗಿ ಮಣೆ ಹಾಕಿತು.
ಬಯಸಿದ್ದೇ ಬೇರೆ ವಾಸ್ತವವೇ ಬೇರೆಯಾಗಿ ವಿಜಯ ವಿಚಲಿತಳಾದಳು. ಸರಿ ಅದರಿಂದ ಶಾಶ್ವತವಾಗಿ ಮುಕ್ತಿ ಹೊಂದಲು ಒಂದು ಬಾರಿ ಮುಂಗೈ ಮಣಿಕಟ್ಟನ್ನು ಕತ್ತರಿಸಿಕೊಂಡಳು; ಉಹು ಸಾಯಲಿಲ್ಲ. ಸರಿ, ರೈಲಿನಿಂದ ಹಾರಿ ಬಿದ್ದಳು. ಊಹು, ಯಮನಿಗೂ ಅವಳ ಕಾಲ್ ಶೀಟ್ ಬೇಡವಾಗಿತ್ತು. ನಿದ್ದೆ ಮಾತ್ರೆಯೂ ಅವಳಿಗೆ ಚಿರನಿದ್ರೆ ತಂದುಕೊಡಲಿಲ್ಲ. ವಿಜಯಗಳಿಗೆ ಎಲ್ಲೆಲ್ಲೂ ಅಪಜಯವೇ ಕಾದಿತ್ತು.
ಸರಿ ಜಿಗುಪ್ಸೆ ಕ್ರೋಡೀಕರಿಸುತ್ತಾ ಹೋಯಿತು. ಸಾಯ್ಲೇ ಬೇಕು ಎಂದು ನಿರ್ಧರಿಸಿದವಳಿಗೆ ಯಾರು ತಾನೇ ಕೈಹಿಡಿಯುತ್ತಾರೆ. ಮೊನ್ನೆ ಭಾನುವಾರ ಪಶ್ಚಿಮ ಗುರಗಾಂವ್ ನಲ್ಲಿ ತಾನು ವಾಸಿಸುತ್ತಿದ್ದ ಫ್ಲಾಟಿನಲ್ಲಿ ದುಪ್ಪಟ್ಟದಿಂದಲೇ ಕತ್ತು ಬಿಗಿದುಕೊಂಡು ಕೊನೆಗೂ ವಿಜಯಜೀಭವ ಆದಳು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಎಸ್ ರಾಮನ್ ವಿಜಯಳ ಆತ್ಮಹತ್ಯೆ ಕಥೆಯನ್ನು ಸಾಧ್ಯಂತವಾಗಿ ಹೇಳಿದ್ದಾರೆ.
ಇನ್ನೂ ಒಂದಷ್ಟು ಕಥೆಯಿದೆ ಕೇಳಿ: ಮುಂಬೈಗೆ ಬರುವ ಮುನ್ನ ವಿಜಯ ಗಂಡನನ್ನು ತೊರೆದಿದ್ದಳು. ಸರಿ ಇಲ್ಲಿಗೆ ಬಂದ ಮೇಲೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಒಂದಷ್ಟು ಸಿಂಗಾರ ಬಂಗಾರ ಮಾಡಿಕೊಂಡಳು. ಆದರೆ ಯಾವುದೂ ಬರಕತ್ತಾಗಲಿಲ್ಲ. ಈ ಮಧ್ಯೆ ದುಬೈಗೂ ಹೋಗಿಬಂದಿದ್ದಳು.












Click it and Unblock the Notifications