ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಡಿ ಕಾರ್ಮಿಕರಿಗಾಗಿ ಯಾದಗಿರಿಯಲ್ಲಿ ಆಸ್ಪತ್ರೆ

By Prasad
|
Google Oneindia Kannada News

Mallikarjun Kharge lays foundation stone for hospital
ಯಾದಗಿರಿ, ಜು. 11 : ಯಾದಗಿರಿ ಜಿಲ್ಲೆಯ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಬೀಡಿ ಮತ್ತು ಗಣಿ ಕಾರ್ಮಿಕರ ಕೇಂದ್ರೀಯ ಆಸ್ಪತ್ರೆಗೆ ಶಂಕು ಸ್ಥಾಪನೆ ನೇರವೇರಿಸಿದರು.

10 ಎಕರೆ ಜಾಗದಲ್ಲಿ, 20 ಕೋಟಿ ರುಪಾಯಿ ವೆಚ್ಚದಲ್ಲಿ, 15 ಹಾಸಿಗೆಗಳಿರುವ ಸುಸಜ್ಜಿತ ಆಸ್ಪತ್ರೆ ಮುಂದಿನ ಎರಡು ವರ್ಷದ ಅವಧಿಯಲ್ಲಿ ತಲೆಎತ್ತಲಿದೆ. ಯಾದಗಿರಿ ನಗರದಲ್ಲಿ ಕಟ್ಟಲಾಗುತ್ತಿರುವ ಆಸ್ಪತ್ರೆ ಭಾರತ ದೇಶದಲ್ಲಿಯೇ 8ನೇಯದು.

ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಕರ್ನಾಟಕಕ್ಕೆ 2,400 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಆದರೆ, ರಾಜಕಾರಣಿಗಳು ಕಿತ್ತಾಟದಲ್ಲಿ ತೊಡಗಿದ್ದಾರೆಯೇ ಹೊರತು ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ದೂರಿದರು. ಗುಲ್ಬರ್ಗಾದಲ್ಲಿ ಇದೇ ತಿಂಗಳು 23ರಂದು 200 ಕೋಟಿ ರು. ವೆಚ್ಚದಲ್ಲಿ ಫಾಮರ್ಸಿ ಆಸ್ಪತ್ರೆ ನಿರ್ಮಿಸಲು ಶಂಕು ಸ್ಥಾಪನೆ ಮಾಡಲಾಗುವು ಎಂದು ಖರ್ಗೆ ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ. ಮುಮ್ತಾಜ್ ಅಲಿಖಾನ್, ರಾಯಚೂರು ಲೋಕಸಭಾ ಸಂಸದ ಸಣ್ಣ ಫಕೀರಪ್ಪ, ಯಾದಗಿರಿ ಶಾಸಕ ಡಾ.ಎ.ಬಿ. ಮಾಲಕರಡ್ಡಿ, ಯಾದಗಿರಿ ಜಿಲ್ಲಾಧಿಕಾರಿ ಗುರುನೀತ್ ತೇಜ್ ಮೇನೆನ್, ನಗರಸಭೆ ಅಧ್ಯಕ್ಷೆ ನಾಗರತ್ನ ಅನಪೂರ, ಡಾ. ವೀರಬಸವಂತರಡ್ಡಿ ಮುದ್ನಾಳ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಅನುಸೂಯ ಬೋರ್‌ಬಂಡಾ ಹಾಗೂ ಬೀಡಿ ಮತ್ತು ಗಣಿ ಕಾರ್ಮಿಕರು ಪಾಲ್ಗೊಂಡಿದ್ದರು.

English summary
Central labor minister Mallikarjun Kharge lays foundation stone for specialty hospital exclusively for beedi and mining workers in Yadgir. He said, Rs 2400 cr has been released for establishing hospitals for beedi workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X