ಬಿಎಂಟಿಸಿ, ಕೆಎಸ್‌ಆರ್ ಟಿಸಿಗೆ 50 ಪೈಸೆ ಲೆಕ್ಕಕ್ಕಿಲ್ಲವೇ?

ಬಿಎಂಟಿಸಿಯಂತೂ ಸ್ಟೇಜ್ ನೆಪದಲ್ಲಿ ಹಗಲು ದರೋಡೆ ಮಾಡುತ್ತಿದೆ. ನಿಯಮದ ಪ್ರಕಾರ ಸ್ಟೇಜಿನ ಅಂತರ 2 ಕಿ. ಮೀ. ಆದರೆ ಬಿಎಂಟಿಸಿ ಮಾತ್ರ ಅರ್ಧ, ಮುಕ್ಕಾಲು ಕಿ.ಮೀ.ಗೆ ಒಂದು ಸ್ಟೇಜ್ ನಿಗದಿ ಮಾಡಿದೆ. ಕೋಟ್ಯಾಂತರ ರೂಪಾಯಿ ಸ್ಥಿರ, ಚರ ಆಸ್ತಿ ಮತ್ತು ಇತರೆ ಮೂಲಗಳಿಂದ ಆದಾಯ ಬರುತ್ತಿದ್ದರೂ ಇವತ್ತಿನ ವರೆಗೂ ಸಂಸ್ಥೆಯವರು ಪತ್ರಿಕೆಗಳಲ್ಲಿ ಆದಾಯ - ವೆಚ್ಚದ ವಿವರ ನೀಡುತ್ತಿಲ್ಲ. ಎಷ್ಟೇ ಡೀಸೆಲ್ ದರ ಹೆಚ್ಚಿದರೂ ದರ ಏರಿಸದ ರೈಲ್ವೆ ಇಲಾಖೆಯನ್ನು ಇವರು ನೋಡಿ ಕಲಿಯಬೇಕು.












Click it and Unblock the Notifications