ಮೇಧಾ ಪಾಟ್ಕರ್ ಆಗಮನ;ಹಳ್ಳಿಗುಡಿ ರೈತರಿಗೆ ಪುನರ್ಜನ್ಮ
ಗದಗ,
ಜು .9: ಮುಂಡರಗಿ ತಾಲ್ಲೂಕಿನ ಹಳ್ಳಿಗುಡಿಯಲ್ಲಿ ನೆಡಯುತ್ತಿದೆ ಸರ್ಕಾರದ ಭೂಸ್ವಾಧೀನದ ವಿರುದ್ಧ ರೈತರ ಹೋರಾಟ. ಪೋಸ್ಕೋ ಕಂಪನಿಗೆ ರೈತರ ಫಲವತ್ತಾದ ಭೂಮಿಯನ್ನು ಮಾರಾಟ ಮಾಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ನಡೆಯುತ್ತಿರುವ ರೈತರ ಚಳುವಳಿಗೆ ಬೆಂಬಲ ಸೂಚಿಸಿ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹಳ್ಳಿಗುಡಿಗೆ ನಿನ್ನೆ ಬೇಟಿ ನೀಡಿದ್ದರು. id="toptextpromo">ಮಾಧ್ಯಮದವರೊಂದಿಗೆ
ಮಾತನಾಡಿದ ಅವರು, "ಸಂವಿಧಾನ ತನ್ನ ಕಾನೂನಿನಲ್ಲಿಯೇ ಗ್ರಾಮಸಭೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು ಯಾವುದೇ ವಿಷಯ ಗ್ರಾಮ ಸಭೆಯಲ್ಲಿ ಮೊದಲು ತೀರ್ಮಾನವಾಗಬೇಕು ಎಂದು ಹೇಳಿದೆ. ಆದರೆ ಕಾನೂನನ್ನು ಗಾಳೀಗೆ ತೂರಿ ಏಕಾಏಕಿ ರೈತರ ಸಾವಿರಾರು ಎಕರೆಯನ್ನು ಸ್ವಾಧೀನಪಡಿಸಿಕೊಂಡು ಮಾರಾಟಮಾಡುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ'' ಎಂದರು. id='are-slot-1' class='oiad oi-axt oiadv'> id='top-searched-articles'>ಓರಿಸ್ಸಾದಲ್ಲಿ
ಪೋಸ್ಕೋ ಏನೆಂಬುದು ಗೊತ್ತಾಗಿದೆ. ಆದರೂ ಕರ್ನಾಟಕದಲ್ಲಿ ಬಿಜೆಪಿ ಈ ಕ್ರಮ ಕೈಗೊಳ್ಳುತ್ತಿರುವುದು ತಮಗೆ ಆಶ್ಚರ್ಯ ತಂದಿದೆ. ರೈತರ ಕೈನಲ್ಲಿರುವ ಜಮೀನು ಅವರ ಜೀವನಕ್ಕೆ ಆಧಾರವಾಗಿದೆ. ಅಲ್ಲಿ ಕಾರ್ಖಾನೆ ಮಾಡಿ ಉದ್ಯೋಗ ಸೃಷ್ಟಿಸಿ, ನಿಮಗೆಲ್ಲ ಕೆಲಸ ನೀಡುತ್ತೇವೆ ಎಂಬ ಆ ಕಂಪೆನಿಯ ಭರವಸೆ ಕೇವಲ ಭೂ ಕಬಳಿಕೆಯ ಹುನ್ನಾರ ಎಂದು ಬಲವಾಗಿ ಪ್ರತಿಪಾದಿಸಿದ ಮೇಧಾ, ತಾವು ಇಂತಹ ವಿಷಯಗಳಲ್ಲಿ ಯಾವಾಗಲೂ ರೈತರ ಪರವಾಗಿ ಇರುವುದಾಗಿ ಘೋಷಿಸಿದರು.











Click it and Unblock the Notifications