ಇಂದು ದೊಡ್ಡಗೌಡರ ದರ್ಶನ; ಯಡಿಯೂರಪ್ಪಗೆ ಶುಭ ಶುಕ್ರವಾರವಾಗಲಿ
ಬೆಂಗಳೂರು
ಜು 8: ಜನ್ಮಜನ್ಮಾಂತರದ ವೈರಿಗಳಂತೆ ವರ್ತಿಸುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಮುಖಾಮುಖಿಯಾಗಲಿದ್ದಾರೆ. id="toptextpromo">ಹಾಸನ
ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ದೇವೇಗೌಡರ ಗುಡುಗಿಗೆ ಬೆದರಿದಂತಿರುವ ಯಡಿಯೂರಪ್ಪ ಅವರು ಶುಕ್ರವಾರ ಸಂಜೆ 5.30ಕ್ಕೆ ತಮ್ಮ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಸಭೆ ಕರೆದು ಅದರಲ್ಲಿ ಭಾಗವಹಿಸುವಂತೆ ದೇವೇಗೌಡ ಮತ್ತು ಹಾಸನ ಜಿಲ್ಲೆಯ ಶಾಸಕರಿಗೆ ಆಹ್ವಾನ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಜಿಲ್ಲೆಯ
ಅಭಿವೃದ್ಧಿಯ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಸನದಲ್ಲಿ ಹಾಗೂ ಬೆಂಗಳೂರಿನ ಮುಖ್ಯಮಂತ್ರಿ ನಿವಾಸದ ಎದುರು ದೇವೇಗೌಡರು ಶಾಸಕರ ಜತೆಗೂಡಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರೇ ಜು. 8ರಂದು ಸಭೆ ನಿಗದಿ ಮಾಡಿದ್ದರು. ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳಿಗೆ ದೇವೇಗೌಡರು 16 ಬೇಡಿಕೆಗಳ ಮನವಿಯನ್ನು ಅಂದು ಅರ್ಪಿಸಿದ್ದರು.











Click it and Unblock the Notifications