ರೇಪ್ ಗೆ ಪ್ರತಿರೋಧ: 16 ರ ಕನ್ಯೆ ಸಜೀವ ದಹನ
ಬೀಡ್(ಮಹಾರಾಷ್ಟ್ರ)
ಜು 8: ತನ್ನ ಶೀಲ ಉಳಿಸಿಕೊಳ್ಳಲು ಹೋರಾಟ ನಡೆಸಿದ 16ರ ಹರೆಯದ ಯುವತಿಯ ಮೇಲೆ ಸಿಟ್ಟಿಗೆದ್ದ ಕಾಮುಕ, ಆಕೆಯನ್ನು ಸಜೀವ ದಹನ ಮಾಡಿದ್ದಾನೆ. ಜೀವನ್ ಕಾಳೆ ತನ್ನ ನೆರೆಮನೆಯ ಯುವತಿಯ ಮೇಲೆ ಅತ್ಯಾಚಾರ ನಡೆಸುವ ಯತ್ನದಲ್ಲಿ ವಿಫಲನಾಗಿದ್ದಾನೆ. ಯುವತಿ ಮನೆಯಲ್ಲಿ ಒಂಟಿಯಾಗಿರುವ ಸಮಯ ಅಬಲೆಯನ್ನು ಹಿಂಸಿಸಿ ಸುಟ್ಟು ಹಾಕಿದ್ದಾನೆ. id="toptextpromo">ಯುವತಿಯ
ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲಾಗಿದೆ. ಆಕೆ ದೇಹ ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇಂದು ಬೆಳಗ್ಗೆ ಆಕೆ ಅಂತ್ಯಕ್ರಿಯೆ ಸಹಾ ನಡೆದು ಹೋಗಿದೆ. id='are-slot-1' class='oiad oi-axt oiadv'> id='top-searched-articles'>ಆರೋಪಿ
ಜೀವನ್ ಕಾಳೆ , ಓಸ್ಮಾನಾಬಾದ್ ಜಿಲ್ಲೆಯ ಮಹಾರುದ್ರ ಮೊಟೆ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ಐಪಿಸಿ ಸೆಕ್ಷನ್ 302 ಅನ್ವಯ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.











Click it and Unblock the Notifications