ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿದ್ದ ಕೋಟೆ ಬಾಗಿಲು ಕಟ್ಟುವುದು ಯಾರ ಹೊಣೆ?

By Rohini Bellary
|
Google Oneindia Kannada News

Kote Anjaneya temple entrance
ಬಳ್ಳಾರಿ, ಜು. 7 : ಕಿಡಿಗೇಡಿಗಳು ಧ್ವಂಸ ಮಾಡಿರುವ ಬಳ್ಳಾರಿ ಕೋಟೆ ಆಂಜನೇಯ ದೇವಸ್ಥಾನದ ಹೆಬ್ಬಾಗಿಲನ್ನು ಜಿಲ್ಲಾಡಳಿತ ಮೂಲ ವಿನ್ಯಾಸದಂತೆಯೇ ನಿರ್ಮಿಸಿ ಪ್ರಾಚೀನತೆಯನ್ನು ಕಾಪಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ರವೀಂದ್ರ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ನೇತೃತ್ವದ ತಂಡ ಕೋಟೆಯ ಧ್ವಂಸಗೊಂಡಿರುವ ಹೆಬ್ಬಾಗಿಲ ಸ್ಥಳಕ್ಕೆ ಭೇಟಿ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಗುರುವಾರ ಮಾತನಾಡಿದರು.

ಶತಮಾನಗಳಷ್ಟು ಇತಿಹಾಸ ಹೊಂದಿರುವ ಬಳ್ಳಾರಿ ಕೋಟೆ ಮತ್ತು ಅದರ ಹೆಬ್ಬಾಗಿಲು ಮಳೆಯಿಂದಾಗಿ ಬಿದ್ದಿಲ್ಲ. ಕೆಲ ದುಷ್ಕರ್ಮಿಗಳು ಈ ಬಾಗಿಲನ್ನು ಉದ್ದೇಶಪೂರ್ವಕವಾಗಿಯೇ ಬೀಳಿಸಿದ್ದಾರೆ. ರಾಯಚೂರು ಸಂಸದ ಸಣ್ಣಫಕ್ಕೀರಪ್ಪ ಅವರ ಮನೆಗೆ ಸುಲಭವಾಗಿ - ಸರಾಗವಾಗಿ ಸಾಗಲಿಕ್ಕಾಗಿ ಈ ಕೋಟೆ ಬಾಗಿಲನ್ನು ಧ್ವಂಸಗೊಳಿಸಲಾಗಿದೆ ಎಂದು ದೂರಿದರು. [ನೆಲಸಮವಾದ ಕೋಟೆಯ ಚಿತ್ರಪಟ]

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬಳ್ಳಾರಿ ಜಿಲ್ಲೆಯಾದ್ಯಂತ ಅರಾಜಕತೆ ನಿರ್ಮಾಣವಾಗಿದೆ. ನಗರದ ಹೃದಯಭಾಗದಲ್ಲಿಯ ಗಡಿಗೆ ಚೆನ್ನಪ್ಪ ವೃತ್ತವನ್ನು ಧ್ವಂಸ ಮಾಡಲಾಯಿತು. ಈ ಟವರ್ ಅನ್ನು ಪುನರ್ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಸದನದಲ್ಲಿ ಭರವಸೆ ನೀಡಿದ್ದರು.

ಆದರೆ, ಕಾಮಗಾರಿ ಈವರೆಗೆ ಪ್ರಾರಂಭವಾಗಿಲ್ಲ. ಈ ಕುರಿತು ಮುಖ್ಯಮಂತ್ರಿಗಳ ವಿರುದ್ಧ ಸದನದಲ್ಲಿ ಪ್ರಿವಿಲೇಜ್ಡ್ ಮೋಷನ್ ಮೂವ್ ಮಾಡಲಾಗುತ್ತದೆ. ಈಗ ಕೋಟೆ ಬಾಗಿಲನ್ನು ಉದ್ಧೇಶಪೂರ್ವಕವಾಗಿಯೇ ಜೆಸಿಬಿಗಳ ಮೂಲಕ ಧ್ವಂಸ ಮಾಡಲಾಗಿದೆ. ಪರಿಸ್ಥಿತಿ ಹೀಗೇ ಬಿಟ್ಟಲ್ಲಿ ಮತ್ತಿನ್ಯಾವ ಕಟ್ಟಡಗಳು ಧ್ವಂಸಗೊಳ್ಳಲಿವೆಯೋ? ಎಂದು ಆತಂಕ ವ್ಯಕ್ತಪಡಿಸಿದರು.

ನೀರಿನ ಮೂಲ ತಿಳಿಸಿ :
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ 2 ಬೃಹತ್ ಕೈಗಾರಿಕೆಗಳು ಪ್ರಾರಂಭಕ್ಕಾಗಿ ಕೃಷಿಯೋಗ್ಯ ಭೂಮಿಯನ್ನು ಸರ್ಕಾರ ಸ್ವಾಧೀನಕ್ಕೆ ಪಡೆಯುತ್ತಿದೆ. ಇದರ ವಿರುದ್ಧ ತೋಂಟದಾರ್ಯ ಶ್ರೀಗಳು ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಈ ಕೈಗಾರಿಕೆಗಳಿಗೆ ನೀರಿನ ಮೂಲ ಯಾವುದು? ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ ಎಂದರು.

English summary
Bellary district Congress has demanded that BJP govt should reconstruct the destructed Kote Anjaneya temple entrance. It has also alleged that this destructive work has been done to pave free path for BJP MP Sanna Fakeerappa's house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X