ಮಹಾಜನಗಳೇ ಮ್ಯಾಕ್ಸಿ ಕ್ಯಾಬ್ ಕಂಡರೆ ಕೈ ಒಡ್ಡಬೇಡಿ : ಅಶೋಕ್

ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಮ್ಯಾಕ್ಸಿಕ್ಯಾಬ್ ಸಂಚಾರವನ್ನು ನಿಷೇಧಿಸಲಾಗಿದೆ. ರಾಜ್ಯಾದ್ಯಂತ ಹಂತ ಹಂತವಾಗಿ ಮ್ಯಾಕ್ಸಿಕ್ಯಾಬ್‌ನ್ನು ನಿಷೇಧಿಸಲಾಗುವುದು. ಏಕಾಏಕಿ ನಿಷೇಧ ಮಾಡಿದರೆ ಇದನ್ನೆ ನಂಬಿಕೊಂಡು ಬದುಕುತ್ತಿರುವ 10 ರಿಂದ 12 ಸಾವಿರ ಕುಟುಂಬಗಳು ಬೀದಿಪಾಲಾಗಬಹುದು. ಹಾಗಾಗಿ ಆ ಕುಟುಂಬಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು.
'ಮಹಾ ಜನರೆ ದಯವಿಟ್ಟು ಸರಕು ಸಾಗಣೆಗೆ ಬಳಸುವ ಮ್ಯಾಕ್ಸಿಕ್ಯಾಬ್‌ಗಳನ್ನು ಹತ್ತಬೇಡಿ. ನಿಮ್ಮ ಸಂಚಾರಕ್ಕೆ ತೊಂದರೆ ಉಂಟಾದರೆ ಸಾರಿಗೆ ಸಂಸ್ಥೆಯಿಂದ ಬಸ್ ಸೌಲಭ್ಯ ಹೆಚ್ಚಿಸಲಾಗುವುದು. ಮ್ಯಾಕ್ಸಿಕ್ಯಾಬ್‌ನಲ್ಲಿ ಜನರನ್ನು ಕರೆದೊಯ್ಯಲು ಯಾರೂ ಪರವಾನಗಿ ಪಡೆಯುತ್ತಿಲ್ಲ. ಸರ್ಕಾರ ವಂಚಿಸುವ ಕ್ಯಾಬ್ ಗಳಲ್ಲಿ ಸಂಚರಿಸಿದರೆ ನೀವು ಕೂಡಾ ವಂಚನೆಯಲ್ಲಿ ಭಾಗಿಯಾದಂತೆ, ಹಾಗಾಗಿ ಕ್ಯಾಬ್ ಹತ್ತುವ ಮುನ್ನ ಯೋಚಿಸಿ' ಎಂದು ಸಚಿವ ಅಶೋಕ್ ಹೇಳಿದ್ದಾರೆ.
ಲೋಕೋಪಯೋಗಿ ಇಲಾಖೆ ಪ್ರತಿ ಹಳ್ಳಿಯಲ್ಲೂ ಅಚ್ಚುಕಟ್ಟಾಗಿ ರಸ್ತೆ ನಿರ್ಮಿಸಿದರೆ, ಎಲ್ಲೆಡೆ ಬಸ್ ಸಂಚಾರ ಇಂದೇ ಆರಂಭಿಸುವೆ. ಈ ಬಗ್ಗೆ ಇಲಾಖೆಯೊಡನೆ ಚರ್ಚಿಸುತ್ತೇನೆ ಎಂದು ಅಶೋಕ್ ಹೇಳಿದರು.












Click it and Unblock the Notifications